Kumta| ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿ, ಸಹ ಸವಾರ ಗಂಭಿರವಾಗಿ ಗಾಯಗೊಂಡ ಘಟನೆ ಕುಮಟಾದ ಗಿಬ್ ಹೈಸ್ಕೂಲ್ ಬಳಿ ಸಂಭವಿಸಿದೆ.

ಈ ಅಪಘಾತದಲ್ಲಿ ಬೈಕ್ ಸವಾರ ಸುಬ್ರಮಣ್ಯ ಬೀರಪ್ಪ ಅಂಬಿಗ (35) ಮೃತಪಟ್ಟ ದುರ್ದೈವಿ. ಸಹ ಸವಾರ ಭಗೀರಥ ಮಹಾದೇವ ಅಂಬಿಗ (25) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಇಬ್ಬರೂ ಹೆಗಡೆ ಗ್ರಾಮದ ನಿವಾಸಿಗಳೆನ್ನಲಾಗಿದೆ.

ಈ ಇಬ್ಬರೂ ಸೇರಿ ಬೈಕ್‌ (KA 47 L7426) ಮೇಲೆ‌ ಮೀನುಗಾರಿಕಾ ಬಲೆ ಖರೀದಿಗಾಗಿ ಮಲ್ಪೆಗೆ ಪ್ರಯಾಣಿಸುತ್ತಿದ್ದ ವೇಳೆ, ಹಿಂಬದಿಯಿಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಸಹ ಸವಾರ ಗಂಭಿರವಾಗಿ ಗಾಯಗೊಂಡ ಎನ್ನಲಾಗಿದೆ.

ಗಾಯಾಳು ಭಗೀರಥ ಅಂಬಿಗನನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.