Karwar| ಇಂದಿನಿಂದ ಕಾರವಾರದಲ್ಲಿ ಶೃಂಗೇರಿ ವಿಧುಶೇಖರ ಭಾರತೀ ಸ್ವಾಮಿಗಳ‌ ನಾಲ್ಕು ದಿನಗಳ ವಿಜಯಯಾತ್ರೆ ಧಾರ್ಮಿಕ ಯಾತ್ರೆ‌ ನಡೆಯಲಿದೆ. ವಿಧುಶೇಖರ ಭಾರತೀ ಸ್ವಾಮಿಗಳ‌‌ ಆಗಮನದ ನಿಮಿತ್ತವಾಗಿ ಇಂದು ಏ.13 ರಿಂದ ಗುರುವಾರ 16 ರವರೆಗೆ ನಾಲ್ಕು ದಿನಗಳ ನಗರದಲ್ಲಿ ಹಲವು‌ ಧಾರ್ಮಿಕ‌ ಕಾರ್ಯಗಳನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿವರ: ಸೋಮವಾರ ಪೂರ್ವಾಹ್ನ 11-30 ಗಂಟೆಗೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಶೇಜವಾಡದ ಶ್ರೀ ಶೆಜೇಶ್ವರ ದೇವಸ್ಥಾನದ ಶಿಲಾನ್ಯಾಸ ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ಕಾರವಾರದ ಶೃಂಗೇರಿ ಶಂಕರ ಮಠಕ್ಕೆ ಜಗದ್ಗುರು ಮಹಾಸ್ವಾಮಿಗಳ ಶುಭಾಗಮನ, ಪೂರ್ಣಕುಂಭ ಸ್ವಾಗತ ಹಾಗೂ ಧೂಳಿ ಪಾದಪೂಜೆ ನಡೆಯಲಿದೆ.

ನಂತರ ಶ್ರೀಗಳವರ ಅಮೃತ ಹಸ್ತದಿಂದ ಶೃಂಗೇರಿ ಶಂಕರ ಮಠದ ಆವರಣದಲ್ಲಿ ನವೀಕರಿಸಿ ನಿರ್ಮಿಸಿದ ಶ್ರೀ ಗುರುಭವನದ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 2 ರಿಂದ ಮಹಾಪ್ರಸಾದ ಇರಲಿದೆ. ಸೋಮವಾರ ಸಂಜೆ 6 ರಿಂದ ಪ್ರಖ್ಯಾತ ಹಿಂದೂಸ್ಥಾನಿ ಸಂಗೀತ ಕಲಾವಿದರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ವಿಜೇತರು ಹಾಗೂ ಶೃಂಗೇರಿ ಶ್ರೀ ಶಾರದಾ ಪೀಠದ ಆಸ್ಥಾನ ವಿದುಷಿ ಡಾ. ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ ಇವರಿಂದ ಭಕ್ತಿ ಸಂಗೀತ ರಸಸಂಜೆ ನಡೆಯಲಿದೆ. ರಾತ್ರಿ 8-30 ರಿಂದ ಶ್ರೀ ಶ್ರೀಗಳವರಿಂದ ಶಾರದಾ ಚಂದ್ರಮೌಳೀಶ್ವರ ಪೂಜೆ ಅಷ್ಟಾವಧಾನ ಸೇವೆ ಹಾಗೂ ಪ್ರಸಾದ ವಿತರಣೆ ನೆರವೇರಲಿದೆ.

ಮಂಗಳವಾರ ಏ.14 ರಂದು ಬೆಳಿಗ್ಗೆ 8 ರಿಂದ ಅರ್ಚಕರಿಂದ ಶಾರದಾ ಚಂದ್ರಮೌಳೀಶ್ವರ ಪೂಜೆ ಹಾಗೂ ಲಲಿತಾ ಹೋಮ, ಪೂರ್ವಾಹ್ನ 10-30 ರಿಂದ ಶಂಕರ ಮಠದಲ್ಲಿ ಭಕ್ತಾದಿಗಳಿಂದ ಪಾದಪೂಜೆ, ಭಿಕ್ಷಾವಂದನೆ. ಪೂರ್ವಾಹ್ನ 11-00 ಗಂಟೆಗೆ ಶ್ರೀಗಳವರ ದಿವ್ಯ ಸಾನ್ನಿಧ್ಯದಲ್ಲಿ ಲಲಿತಾ ಹೋಮದ ಪೂರ್ಣಾಹುತಿ ಹಾಗೂ ಮಧ್ಯಾಹ್ನ 2 ರಿಂದ ಮಹಾಪ್ರಸಾದ. ಸಂಜೆ 5-30 ರಿಂದ ಶಂಕರ ಮಠದಲ್ಲಿ ಶ್ರೀಗಳವರಿಗೆ ಅಭಿವಂದನಾ ಕಾರ್ಯಕ್ರಮ, ವೇದಘೋಷ, ಶಾಂಕರ ಸ್ತೋತ್ರ ಪಠಣ, ಸ್ವಾಗತ ಗೀತೆ, ಸ್ವಾಗತ ಭಾಷಣ, ಗುರುವಂದನಾ ಸಭೆ, ಶಂಕರ ಮಠದ ಆಡಳಿತ ಸಮಿತಿಯಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಫಲಕಾಣಿಕೆ ಸಮರ್ಪಣೆ, ಶ್ರೀಗಳವರಿಂದ ಅನುಗ್ರಹ ಭಾಷಣ. ರಾತ್ರಿ 8-30 ರಿಂದ ಶ್ರೀಗಳವರಿಂದ ಶಾರದಾ ಚಂದ್ರಮೌಳೀಶ್ವರ ಪೂಜೆ ಅಷ್ಟಾವಧಾನ ಸೇವೆ ಹಾಗೂ ಪ್ರಸಾದ ವಿತರಣೆ ನೆರವೇರಲಿದೆ.

ಏ.15 ಬುಧವಾರ ಬೆಳಿಗ್ಗೆ 8 ರಿಂದ ಅರ್ಚಕರಿಂದ ಶಾರದಾ ಚಂದ್ರ ಮೌಳೀಶ್ವರ ಪೂಜೆ. ಪೂರ್ವಾಹ್ನ 9 ರಿಂದ ಶ್ರೀಗಳವರ ಅಮೃತ ಹಸ್ತದಿಂದ ಕಾರವಾರದ ಕಾಜುಬಾಗದಲ್ಲಿ ಅಖಿಲ ಕೋಮಾರಪಂಥ ಸಮಾಜದವರ ಸಭಾಭವನದ ಉದ್ಘಾಟನೆ ಹಾಗೂ ಶ್ರೀಗಳವರಿಂದ ಅನುಗ್ರಹ ಭಾಷಣ. ಪೂರ್ವಾಹ್ನ 10-30 ರಿಂದ ಕಾರವಾರ ಶಂಕರ ಮಠದಲ್ಲಿ ಭಕ್ತಾದಿಗಳಿಂದ ಪಾದಪೂಜೆ, ಭಿಕ್ಷಾವಂದನೆ. ಮಧ್ಯಾಹ್ನ 2-00 ರಿಂದ ಮಹಾಪ್ರಸಾದ. ಸಂಜೆ 6 ರಿಂದ ಕಾರವಾರ ಶ್ರೀ ಮಾಲಾದೇವಿ ಮೈದಾನದಲ್ಲಿ ಸಮಸ್ತ ನಾಗರಿಕರ ವತಿಯಿಂದ ಶ್ರೀಗಳವರಿಗೆ ಅಭಿವಂದನಾ ಕಾರ್ಯಕ್ರಮ ಹಾಗೂ ಶ್ರೀಗಳವರಿಂದ ಅನುಗ್ರಹ ಭಾಷಣ. ಹಾಗೂ ರಾತ್ರಿ 8-30 ರಿಂದ ಶ್ರೀಗಳವರಿಂದ ಶಂಕರಮಠದಲ್ಲಿ ಶಾರದಾ ಚಂದ್ರಮೌಳೀಶ್ವರ ಪೂಜೆ, ಅಷ್ಟಾವಧಾನ ಸೇವೆ ಹಾಗೂ ಪ್ರಸಾದ ವಿತರಣೆ ಇರಲಿದೆ.

ಏ. 16 ಗುರುವಾರ ಬೆಳಿಗ್ಗೆ 8 ರಿಂದ ಅರ್ಚಕರಿಂದ ಲ ಶಾರದಾ ಚಂದ್ರಮೌಳೀಶ್ವರ ಪೂಜೆ ಹಾಗೂ ಸುದರ್ಶನ ಹೋಮ. ಪೂರ್ವಾಹ್ನ 10-30 ರಿಂದ ಶಂಕರ ಮಠದಲ್ಲಿ ಭಕ್ತಾದಿಗಳಿಂದ ಪಾದಪೂಜೆ ಹಾಗೂ ಭಿಕ್ಷಾವಂದನೆ. ಪೂರ್ವಾಹ್ನ 11-00 ರಿಂದ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಸುದರ್ಶನ ಹೋಮದ ಪೂರ್ಣಾಹುತಿ.ಮಧ್ಯಾಹ್ನ 2 ಗಂಟೆಗೆ ಮಹಾಪ್ರಸಾದ ಹಾಗೂ ಸಂಜೆ 4 ಗಂಟೆಗೆ ಜಗದ್ಗುರುಗಳ ವಿಜಯಯಾತ್ರೆ ಮುಂದುವರಿಯುವುದು.