Gokarn| ಇಲ್ಲಿನ ಓಂ ಬೀಚ್ ಕಡಲತೀರದಲ್ಲಿ ಕುಡಿದ ಮತ್ತಿನಲ್ಲಿ ಈಜಲು ತೆರಳಿದ್ದ ಪ್ರವಾಸಿಗನೊಬ್ಬನು ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣಾಪಾಯದಲ್ಲಿದ್ದಾಗ ಜೀವರಕ್ಷಕ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ನಡೆದಿದೆ.

ಮಧ್ಯಪ್ರದೇಶ ಮೂಲದ ಸಂಜಯ್ ಗುಪ್ತ (30) ಎಂಬಾತನೇ ಜೀವರಕ್ಷಕ ಸಿಬ್ಬಂದಿಗಳಿಂದ ರಕ್ಷಣೆಗೊಳಗಾದವ. ಈತ ಇಲ್ಲಿನ ಓಂ ಬೀಚ್ ಕಡಲ ತೀರಕ್ಕೆ ಪ್ರವಾಸಕ್ಕೆ ಬಂದಿದ್ದ. ಕುಡಿದ ಮತ್ತಿನಲ್ಲಿ ಈಜಲು ತೆರಳಿದಾಗ ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣಾಪಾಯದಲ್ಲಿದ್ದ. ಆಗ ಅಲ್ಲಿ ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿಗಳು ಜೀವ ಉಳಿಸಿದ್ದಾರೆ.

ಗುರುವಾರ ಸಂಜೆ 4.50ರ ಸುಮಾರಿಗೆ ಸಮುದ್ರದಲ್ಲಿ ನೀರಿನ ರಭಸ ಮತ್ತು ಅಲೆಗಳು ತೀವ್ರವಾಗಿರುವುದರ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಹ ತನ್ನ ಗೆಳೆಯ ನೋಡನೆ ಸಂಜಯ ಗುಪ್ತ ಈಜಲು ತೆರಳಿದ್ದಾನೆ. ಈಜಲು ತೆರಳಿದಾಗ ಅಲೆಯ ರಬಸಕ್ಕೆ ಸಿಲುಕಿ ಮುಳುಗುತ್ತಿದ್ದನ್ನು ಗಮನಿಸಿದ ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿಗಳಾದ ಹರೀಶ್ ಮೂಡಂಗಿ, ಮಂಜೇಶ ಹರಿಕಂತ್ರ ಪ್ರವಾಸಿಗ ನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.