Karwar| ಅಪಾರ್ಟ್ಮೆಂಟ್ ನಲ್ಲಿರುವ ಮನೆಯೊಂದಕ್ಕೆ ಕಳ್ಳರು ನುಗ್ಗಿ ಹಣ ಕಳ್ಳತನ ಮಾಡಿದ ಘಟನೆ ಕಾರವಾರದಲ್ಲಿ ನಡೆದಿದೆ.
ಫೋಟೋಗ್ರಾಫರ್ ಸೂರಜ ನಾರಾಯಣ ಜೋಗಳೆಕರ ಎಂಬುವವರ ಮನೆಯಲ್ಲಿಯೇ ಕಳ್ಳತನ ನಡೆದಿದೆ. ಇವರ ಕಾಜುಭಾಗದ ಮುಖ್ಯ ರಸ್ತೆಯಲ್ಲಿರುವ ರಾಯಲ್ ಎಂಬಸಿ ಅಪಾರ್ಟಮೆಂಟ್‌ನಲ್ಲಿನ ಮನೆಗೆ ಕಳ್ಳರು ನುಗ್ಗಿ ಮನೆ ಬಾಗಿಲಿನ ಕೊಂಡಿಯನ್ನು ಮುರಿದು ಒಳನುಗ್ಗಿದ್ದಾರೆ. ಮನೆಯೊಳಗಿನ ಟ್ರೆಜರಿಯಲ್ಲಿ ಇಡಲಾಗಿದ್ದ ಸುಮಾರು ₹65 ಸಾವಿರ ನಗದು ಹಣವನ್ನು ಕಳ್ಳರು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಕಾರವಾರ ಶಹರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
