Ankola| ಕೋಳಿ ಗೂಡಿಗೆ ನುಗ್ಗಿದ ಹೆಬ್ಬಾವೊಂದು ಐದು ಕೋಳಿಗಳನ್ನು ನುಂಗಿದ ಘಟನೆ ತಾಲೂಕಿನ ಹಾರವಾಡ ಗ್ರಾಮದಲ್ಲಿ ನಡೆದಿದೆ.

ಹಾರವಾಡದ ನಿವಾಸಿ ವಿಷ್ಣು ನಾಯ್ಕ ಅವರ ಮನೆಯ ಕೋಳಿ ಗೂಡಿಗೆ ರಾತ್ರಿ ವೇಳೆ ನುಗ್ಗಿದ ಹೆಬ್ಬಾವು, ಗೂಡಿನಲ್ಲಿದ್ದ ಐದು ಕೋಳಿಗಳನ್ನು ನುಂಗಿದೆ. ಮುಂಜಾನೆ ಕೋಳಿಗಳನ್ನು ಹೊರಗೆ ಬಿಡಲು ಹೋದ ವೇಳೆ ಗೂಡಿನೊಳಗೆ ಹೆಬ್ಬಾವು ಕಂಡು ಮನೆಯವರು ಆತಂಕಗೊಂಡಿದ್ದಾರೆ. ತಕ್ಷಣ ಉರಗ ತಜ್ಞ ಪ್ರಶಾಂತ ಅವರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಅವರು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಐದು ಕೋಳಿಗಳನ್ನು ನುಂಗಿದ್ದ ಕಾರಣ ಹೆಬ್ಬಾವು ಭಾರವಾಗಿ ಕಾಣುತ್ತಿತ್ತು. ಬಳಿಕ ಹೆಬ್ಬಾವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.