Karwar| ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಕಾರವಾರ- ಬೆಂಗಳೂರು ನಡುವೆ ನೂತನ ಪಲ್ಲಕ್ಕಿ ಬಸ್ (Non AC) ಸೇವೆಯು ನಾಳೆ ಮಾರ್ಚ್ 11 ರಿಂದ ಆರಂಭವಾಗಲಿದೆ.

ಈ ಬಸ್ ಪ್ರತಿದಿನ ಅಂಕೋಲಾ-ಗೋಕರ್ಣ-ಶಿರಸಿ-ದಾವಣಗೆರೆ- ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಕಾರವಾರದಿಂದ ಸಂಜೆ 7.30 ಕ್ಕೆ ಹೊರಟು, ಅಂಕೋಲಾ ರಾತ್ರಿ.8.15, ಗೋಕರ್ಣ 8.50, ಶಿರಸಿ 10.45 ಹಾಗೂ ಬೆಂಗಳೂರಿಗೆ ಬೆಳಗ್ಗೆ 7.30 ಕ್ಕೆ ತಲುಪಲಿದೆ.
ಇನ್ನು ಬೆಂಗಳೂರಿನಿಂದ ರಾತ್ರಿ 8.15 ಕ್ಕೆ ಹೊರಟು ಬೆಳಗ್ಗೆ 8 ಗಂಟೆಗೆ ಕಾರವಾರಕ್ಕೆ ತಲುಪಲಿದೆ.
ಈ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಲು ಆನ್‌ಲೈನ್ ಬುಕ್ಕಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ವಾ.ಕ.ರ.ಸಾ.ಸಂಸ್ಥೆಯ ಪ್ರಕಟಣೆ ತಿಳಿಸಿದೆ.
