Haliyal| ಅಕ್ರಮ ಸ್ಪೋಟಕ ಸಾಗಾಟವನ್ನು ಪೋಲಿಸರು ಪತ್ತೆ ಹಚ್ಚಿ ಓರ್ವನನ್ನು ಹಳಿಯಾಳದಲ್ಲಿ ಬಂಧಿಸಿದ್ದಾರೆ.

ಧಾರವಾಡ ಮೂಲದ ನಾಗರಾಜ ಸಿದ್ದಕನವರ್ ಎಂಬುವವನೇ ಸ್ಪೋಟಕ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಬಂಧಿತ ವ್ಯಕ್ತಿ. ಖಚಿತ ಮಾಹಿತಿಯ ಮೇರೆಗೆ ಪೋಲಿಸರು ತೆಗ್ನಳ್ಳಿ ಕ್ರಾಸ್ ಕಲ್ಲು ಕ್ವಾರಿ ಬಳಿ ಕಾರ್ಯಾಚರಣೆ ನಡೆಸಿದಾಗ ಆರೋಪಿ ಸ್ಪೋಟಕ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ಆರೋಪಿಯಿಂದ 72 ಜಿಲೇಟಿನ್ ಕಡ್ಡಿಗಳು ಹಾಗೂ 52 ಡಿಟೋನೇಟರ್‌ಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಹುಬ್ಬಳ್ಳಿ ಬಾಂಬ್ ನಿಷ್ಕ್ರಿಯ ದಳ, ಕಾರವಾರ ಎಸಿಎಸ್ ತಂಡ ಪರಿಶೀಲನೆ ನಡೆಸಿದ್ದು, ಕಲಘಟಗಿ ಭಾಗದಿಂದ ಸ್ಫೋಟಕ ಪಡೆದಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ಮುಂದುವರೆದಿದೆ.
