Sirsi|Doctor murdered in Sirsi; SP Deepan visits the spot|ಇಲ್ಲಿನ ಕೆ.ಎಚ್.ಬಿ ಕಾಲೋನಿಯ ಮನೆಯಲ್ಲಿ ಭೀಕರವಾಗಿ ಹತ್ಯೆಯಾದ ಆಯುರ್ವೇದ ವೈದ್ಯ ಡಾ.ರಮೇಶ ಕಲಗುಟಕರ್ ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎರಡನೇಯ ಮದುವೆಯ ಸಿದ್ಧತೆಯಲ್ಲಿದ್ದ ಆಯುರ್ವೇದ ವೈದ್ಯ ಡಾ. ರಮೇಶ್ ಕಲಘುಟಕರ್ (51) ನನ್ನು ಮಾರಕ ಅಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಐದು ತಿಂಗಳ ಹಿಂದಷ್ಟೇ ಈತನ ಹೆಂಡತಿ ಮೃತಪಟ್ಟಿದ್ದಳು. ಹೀಗಾಗಿ ಎರಡನೇ ವಿವಾಹ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದ, ಏ.19 ಕ್ಕೆ ಈತನ ವಿವಾಹ ನಿಶ್ಚಯವಾಗಿತ್ತು. ಆದರೆ ಶನಿವಾರ ಏ.18ರ ರಾತ್ರಿಯೇ ಅಪರಿಚಿತರು ವೈದ್ಯ ಕಲಗುಟಕರ್ ಮನೆಗೆ ನುಗ್ಗಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಅಲ್ಲದೇ ಈ ಕೃತ್ಯ ಎಸಗಿದ ನಂತರ ಮನೆಯ ಮುಂದಿನ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದರು. ಮಾರನೇ ದಿನ ವೈದ್ಯನ ಸಹೋದರ ಈರಪ್ಪ ಫಕೀರಪ್ಪ ಕಲಗುಟಕರ್ ಮನೆ ಬಾಗಿಲ ಬೀಗ ಮುರಿದು ತೆಗೆದು ಮನೆಯೊಳಗೆ ಹೋದಾಗ ಘಟನೆ ಬೆಳಕಿಗೆ ಬಂದಿತ್ತು. ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ 33/2026 ಕಲಂ: 103(1) BNS 2023 ನೇದರ ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಘಟನಾ ಸ್ಥಳ ಕೆ.ಹೆಚ್.ಬಿ ಕಾಲೋನಿ ಶಿರಸಿ ಸ್ಥಳಕ್ಕೆ ಎಸ್ಪಿ ದೀಪನ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹಾಜರಿದ್ದ ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
