ಭಾರತ ಹಾಗು ವೆಸ್ಟ್ ಇಂಡೀಸ್ ತಂಡಗಳು ಕೋಲ್ಕತ್ತಾದ ಈಡೆನ್ ಗಾರ್ಡನ್ ಮೈದಾನದಲ್ಲಿ ಸೂಪರ್-೮ ಹಂತದ ಕೋನೆಯ ಹಾಗೂ ನಿರ್ಣಾಯಕ ಪಂದ್ಯ ಆಡಲಿದ್ದು ಈ ಪಂದ್ಯದಲ್ಲಿ ಗೆಲ್ಲುವ ತಂಡವು t20 worldcup ನ ಸೆಮಿಪೈನಲ್ಗೆ ಪ್ರವೇಶ ಪಡೆಯಲಿದೆ.
ಭಾರತ-ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪಂದ್ಯಕ್ಕೆ ಇನ್ನೂ ಎರಡು ದಿನಗಳಿದ್ದು ಮಾರ್ಚ 1 ರಂದು ಪಂದ್ಯ ನಡೆಯಲಿದೆ. ಈಗಾಗಲೇ ಅಭಿಮಾನಿಗಳು ಕಾತುರದಿಂದ ಈ ಪಂದ್ಯಕ್ಕಾಗಿ ಕಾದು ಕುಳಿತಿದ್ದು ಎರಡೂ ತಂಡಗಳ ಬಲಾಬಲ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ.
ಈ ಮೊದಲಿನ T20 ವಿಶ್ವಕಪ್ ನಲ್ಲಿ ಎರಡು ತಂಡಗಳ ಬಲಾಬಲ ಹೀಗಿದೆ.
T20 ವಿಶ್ವಕಪ್ ನಲ್ಲಿ ಭಾರತ- ವಿಂಡೀಸ್ ತಂಡಗಳು ನಾಲ್ಕುಬಾರಿ ಮುಖಾಮುಖಿಯಾಗಿದ್ದು ವಿಂಡೀಸ್ ಮೇಲಿಗೈ ಸಾಧಿಸಿದೆ. ವಿಂಡೀಸ್ ಮೂರು ಪಂದ್ಯ ಗೆದ್ದರೆ ಭಾರತ ಕೇವಲ ಒಂದು ಪಂದ್ಯ ಮಾತ್ರ ಗೆದ್ದುಕೊಂಡಿದೆ.
2009 – ವಿಂಡೀಸ್ಗೆ ಗೆಲುವು
ಇಂಗ್ಲೆಂಡ್ ನಲ್ಲಿ ನಡೆದ 2010 T20 ವಿಶ್ವಕಪ್ ನಲ್ಲಿ ವಿಂಡೀಸ್ ಭಾರತವನ್ನು ಸುಲಭವಾಗಿ ಸೋಲಿಸಿತ್ತು. ಭಾರತ ನೀಡಿದ್ದ ೧೫೪ ರನ್ ಗಳನ್ನು ಸುಲಭವಾಗಿ ತಲುಪುವ ಮೂಲಕ ಗೆಲುವಿನ ಅಭಿಯಾನಕ್ಕೆ ಚಾಲನೆ ನೀಡಿತ್ತು ವಿಂಡೀಸ್.
2010 ವಿಂಡೀಸ್ ಗೆ 14 ರನ್ ಗಳ ಗೆಲವು
ಕೆರೆಬಿಯನ್ನಲ್ಲಿ ನಡೆದ ೨೦೧೦ ರ ವಿಶ್ವಕಪ್ ನಲ್ಲಿ ವಿಂಡೀಸ್ ಪರ ಕ್ರಿಸ್ ಗೇಲ್ 99 ರನ್ ಗಳೊಂದಿಗೆ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು. ವಿಂಡೀಸ್ ಭಾರತಕ್ಕೆ ೧೬೯ ರನ್ಗಳ ಗುರಿ ನೀಡಿತ್ತು. ವಿಂಡೀಸ್ ನೀಡಿದ್ದ ೧೭೦ ರನ್ ಗಳ ಗುರಿ ಬೆನ್ನಟ್ಟಿದ್ದ ಭಾರತ ೧೫೫/೯ ವಿಕೆಟ್ ಕಳೆದುಕೊಂಡು ೧೪ ರನ್ ಗಳ ಸೋಲು ಅನುಭವಿಸಿತ್ತು.
2014 t20 ವಿಶ್ವಕಪ್ ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧದ ಮೊದಲ ಗೆಲುವು
ಬಾಂಗ್ಲಾದೇಶದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭಾರತದ ವಿರುದ್ಧ ಸೋಲು ಅನುಭವಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ೧೨೯ ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಈ ಸುಲಭದ ಗುರಿ ಬೆನ್ನಟ್ಟಿದ್ದ ಭಾರತ ತಂಡವು ಗೆಲುವಿನ ನಗೆ ಬೀರಿತ್ತು.
2016 ರ ಸೆಮಿಪೈನಲ್ ನಲ್ಲಿ ಸೋತ ಭಾರತ
ಮುಂಬೈನಲ್ಲಿ ನಡೆದ 2016 ರ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ರೋಚಕವಾಗಿ ಸೋಲಿಸಿ ವಿಂಡೀಸ್ ಪೈನಲ್ ಪ್ರವೇಶಿಸಿತ್ತು. ಭಾರತ ನೀಡಿದ್ದ ಬೃಹತ್ ಮೊತ್ತ ಬೆನ್ನಟ್ಟಿದ್ದ ವಿಂಡೀಸ್ ಲೆಂಡ್ಲ್ ಸಿಮನ್ಸ್ ಅವರ ಅಮೋಘ ೮೨ ರನ್ ಗಳ ನೆರವಿನಿಂದ ಗೆಲವು ಸಾಧಿಸಿತ್ತು.
ಸಧ್ಯ ಎರಡೂ ತಂಡಗಳನ್ನು ಸೋಲಿಸಿ ಸೌತ್ ಆಫ್ರಿಕಾ ಸೆಮಿಪೈನಲ್ ಪ್ರವೇಸಿಸಿದೆ. ಭಾರತ ಹಾಗೂ ವೆಸ್ಟ್ ವಿಂಡೀಸ್ ತಂಡಕ್ಕೆ ಮಾರ್ಚ 1 ರಂದು ನಡೆಯುವ ಪಂದ್ಯ ಮಹತ್ವದಾಗಿದ್ದು ಗೆಲ್ಲುವ ತಂಡ ಸೆಮಿಪೈನಲ್ ಪ್ರವೇಶ ಮಾಡಲಿದೆ.
