Yellapur| ಕಾರೊಂದು ಚಾಲಕ ಸಮೇತ ಸುಟ್ಟು ಕರಕಲಾದ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ ಘಟ್ಟದ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಡೆದಿದೆ‌

ವೊಕ್ಸವ್ಯಾಗನ್ ಕಂಪನಿಗೆ ಸೇರಿದ ಈ ಕಾರು ಹುಬ್ಬಳ್ಳಿಯಿಂದ ಅಂಕೋಲಾ ಕಡೆ ಬರುತ್ತಿತ್ತು ಎನ್ನಲಾಗಿದೆ. ಕಾರಿನೊಂದಿಗೆ ಕಾರು ಚಾಲಕ ಸಹ ಗುರುತು ಸಿಗದಂತೆ ಸುಟ್ಟು ಕರಕಲಾಗಿದ್ದಾನೆ.

ಸ್ಥಳಕ್ಕೆ ಯಲ್ಲಾಪುರ ಪೊಲೀಸರ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹೊನ್ನಾವರದ ಸೂಳೆಮುರ್ಕಿ ಬಳಿ ಇತ್ತೀಚೆಗೆ ಕಾರೊಂದು ಚಾಲಕ ಸಮೇತ ಸುಟ್ಟು ಕರಕಲಾಗಿತ್ತು. ಇದು ಆಕಸ್ಮಿಕ ಘಟನೆಯೆಂದು ಮೊದಲು ಭಾವಿಸಲಾಗಿತ್ತು. ನಂತರ ಪೋಲಿಸರು ಚುರುಕಿನ ತನಿಖೆ ನಡೆಸಿ ಕೊಲೆ ಕೃತ್ಯ‌ ಬಯಲಿಗೆಳೆದು ಆರೋಪಿಗಳನ್ನು‌ ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.