Karwar| ಇಲ್ಲಿನ ಬಾಡ ಹಿರೇಶಿದ್ದಾ ಚಂದ್ರಾದೇವಿ ವಾಡಾದಲ್ಲಿರುವ ಚಂದ್ರಾದೇವಿಯ ವಾರ್ಷಿಕೋತ್ಸವ ಇದೇ ಏ.12 ಕ್ಕೆ ಸಂಭ್ರಮದಿಂದ ನಡೆಯಲಿದೆ.

ವಾರ್ಷಿಕೋತ್ಸವದ ನಿಮಿತ್ತವಾಗಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಏ.11 ಶನಿವಾರದಂದು ಚಂದ್ರಾದೇವಿ ಪ್ರೀತ್ಯರ್ಥ ವಾರ್ಷಿಕ ಚಂಡಿಹೋಮ ನಡೆಯಲಿದೆ.

ನಂತರ ಏ.12 ರಂದು ಬೆಳಗ್ಗೆ ಉಡಿ ಸೇವೆ, ತುಲಾಭಾರ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 11 ಕ್ಕೆ ನರಸಿಂಹ ಅವತಾರ ಎಂಬ ಮರಾಠಿ ಯಕ್ಷಗಾನ ನಡೆಯಲಿದೆ.

ಇನ್ನು‌ ಏ.13 ರಂದು ಬೆಳಗ್ಗೆಯಿಂದ‌ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 10ಕ್ಕೆ ಕೊಂಕಣಿ ನಾಟಕ ‘ತು ಮಾಗೇಲೆ ಆಯ್ಕಲ್ ದುಸಯ್ಯಾಲೆ” ನಡೆಯಲಿದೆ.

ಏ.15ರ ಬುಧವಾರ ಖಾಪ್ರಿ ದೇವರ ವಾರ್ಷಿಕೋತ್ಸವ ನಡೆಯಲಿದೆ. ಪ್ರತಿ ದಿನ ನಡೆಯುವ ಈ ಎಲ್ಲಾ ಧಾರ್ಮಿಕ‌ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿ, ದೇವರ ಕೃಪೆಗೆ ಪಾತ್ರರಾಗುವಂತೆ ಚಂದ್ರಾದೇವಿ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ಕೋರಿದ್ದಾರೆ.