Siddapur| ತಾಲೂಕಿನ ವಂದಾನೆ ಗ್ರಾಮದ ಮಾಣಿಕ್ಯ ಹೋಟೆಲ್ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ನಡೆಯುತ್ತಿದ್ದ ಓಸಿ ಮಟ್ಕಾ ಜೂಜಾಟದ ಮೇಲೆ ಸಿದ್ದಾಪುರ ಪೊಲೀಸರು ದಾಳಿ ನಡೆಸಿ ಬುಕ್ಕಿ ಸಮೇತ ಇಬ್ಬರ ಮೇಲೆ‌ ಪ್ರಕರಣ ದಾಖಲಿಸಿದ್ದಾರೆ.

ಸಿದ್ದಾಪುರದ ಕಲಕೈ ಲಂಬಾಪುರ ನಿವಾಸಿ ಮಂಜುನಾಥ ಸುಬ್ಬಾ ಗೌಡ (49) ಎಂಬಾತ ಓಸಿ ಬುಕಿಯಾದ ಶಿರಸಿಯ ಉದಯ ಶೆಟ್ಟಿ ಎಂಬಾತನ ಸಹಾಯದಿಂದ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಎನ್ನಲಾಗಿದೆ.

ಶನಿವಾರ ಮಧ್ಯಾಹ್ನ 12.15ರ ಸುಮಾರಿಗೆ ವಂದಾನೆ ಗ್ರಾಮದ ಮಾಣಿಕ್ಯ ಹೋಟೆಲ್ ಎದುರು ಪೋಲಿಸರು ದಾಳಿ ನಡೆಸಿದಾಗ ಆರೋಪಿಯ ಬಳಿ ಜೂಜಾಟಕ್ಕೆ ಬಳಸುತ್ತಿದ್ದ ₹1,950 ನಗದು, ಓಸಿ ಅಂಕೆ ಸಂಖ್ಯೆ ಬರೆದ ಚೀಟಿ, ಬಾಲ್ ಪೆನ್ ಹಾಗೂ ಅಂಕೆ ಬರೆಯಲು ಬಳಸಿದ ಪೇಪರ್ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 146/2026 ದಾಖಲಾಗಿದ್ದು, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 112 ಹಾಗೂ ಕೆ.ಪಿ. ಆಕ್ಟ್ ಕಲಂ 78(3) ಅಡಿ ಪ್ರಕರಣ ದಾಖಲಿಸಲಾಗಿದೆ.