Bhatkal| ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ತೆರಳಿದ್ದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಧಾರುಣ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಮಾಲತಿ ಜಟ್ಟಪ್ಪ ನಾಯ್ಕ (40), ಲಕ್ಷ್ಮೀ ಮಾದೇವ ನಾಯ್ಕ (40), ಲಕ್ಷ್ಮೀ ಶಿವರಾಮ ನಾಯ್ಕ (40), ಲಕ್ಷ್ಮೀ ಅಣ್ಣಪ್ಪ ನಾಯ್ಕ (50), ಉಮೇಶ ಮಂಜುನಾಥ ನಾಯ್ಕ (25) ಲಕ್ಮೀ ಮಾದೇವ ನಾಯ್ಕ (40), ಜ್ಯೋತಿ ನಾಗಪ್ಪ ನಾಯ್ಕ (38) ಹಾಗೂ ಮಾಸ್ತಮ್ಮ ಮಂಜುನಾಥ ನಾಯ್ಕ ( 45) ಎಂದು ಗುರುತಿಸಲಾಗಿದೆ.

ಮುಳುಗುತ್ತಿದ್ದ ಮಾದೇವಿ ಮಂಜುನಾಥ ನಾಯ್ಕ (60), ಲತಾ ಜಗದೀಶ್ ನಾಯ್ಕ ( 38) ಹಾಗೂ ನಾಗರತ್ನ ಈಶ್ವರ ನಾಯ್ಕ (40) ಮೂವರ ರಕ್ಷಣೆ ಮಾಡಲಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಮಾದೇವ ಬೈರಪ್ಪ ನಾಯ್ಕ (40) ಮಂಜಮ್ಮ ಗೋಯ್ದ ನಾಯ್ಕ (35) ಹಾಗೂ ನಾಗರತ್ನ ಪರಮೇಶ್ವರ ನಾಯ್ಕ (40) ಇವರ ಶೋಧ ಕಾರ್ಯ ಮುಂದುವರೆದಿದೆ.

ಕಪ್ಪೆ ಚಿಪ್ಪು ಆರಿಸಲು ಹದಿನಾಲ್ಕು ಜನರ ತಂಡ ತೆರಳಿತ್ತು. ಹೆಚ್ಚಿನ ನೀರಿನ ಹರಿವು ಹಾಗೂ ಅಲೆಗಳ ಅಬ್ಬರದಿಂದ ನೀರಿನ ಮಟ್ಟ ಏರಿಕೆಯಾಗಿ ದುರಂತ ಸಂಭವಿಸಿದೆ ಎನ್ನಲಾಗಿದೆ.