Haliyal| ಮನೆಯಲ್ಲಿಟ್ಟಿದ್ದ ನಾಡ ಬಾಂಬ್ ಸ್ಪೋಟಗೊಂಡು, ಅಕ್ಕಪಕ್ಕದ ಹಲವು ಮನೆಗಳಿಗೆ ಬಾರಿ ಹಾನಿಯಾದ ಘಟನೆ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವಾಸುದೇವ ಎಂಬುವವರಿಗೆ ಸೇರಿದ ಮನೆ ಎನ್ನಲಾಗಿದ್ದು, ನಾಡಬಾಂಬ್ ಸ್ಪೋಟಗೊಂಡ ನಂತರ ಮನೆ ಮಾಲೀಕ ಪರಾರಿಯಾಗಿದ್ದಾನೆ. ಸ್ಪೋಟದ ಪರಿಣಾಮವಾಗಿ ಅಕ್ಕಪಕ್ಕದ ಹಲವು ಮನೆಗಳಿಗೆ ಹಾನಿಯಾಗಿದೆ.

ಕಾಡುಪ್ರಾಣಿಗಳ ಬೇಟೆಗೆ ನಾಡಬಾಂಬ್ ಸಂಗ್ರಹಿಸಿದ್ದ ಶಂಕೆ ವ್ಯಕ್ತವಾಗಿದ್ದು, ನಾಡ ಬಾಂಬ್ ಸ್ಪೋಟದ‌ ಶಬ್ದಕ್ಕೆ ಇಡೀ ಗ್ರಾಮದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಪುಟ್ಟ ಗ್ರಾಮದಲ್ಲಿ ಈಗ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಸ್ಥಳಕ್ಕೆ ಹಳಿಯಾಳ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.