ದಾಂಡೇಲಿ: ಇಬ್ಬರು ಮಹಿಳೆಯರು ಸಾರ್ವಜನಿಕ ಸ್ಥಳದಲ್ಲೇ, ವ್ಯಕ್ತಿಯ ಮೇಲೆ ಹಲ್ಲೆಮಾಡಿ, ಬೆದರಿಕೆ ಹಾಕಿದ ಘಟನೆ ದಾಂಡೇಲಿಯಲ್ಲಿ ನಡೆದಿದೆ.
ದಾಂಡೇಲಿ ಬಾಂಬೇಚಾಳದ ನಾಗರಾಜ ಹೊನ್ನಪ್ಪ ಬಾದರದಿನ್ನಿ (38) ಎಂಬುವವರೇ, ಈ ಮಹಿಳಾ ಮಣಿಗಳಿಂದ ಹಲ್ಲೆಗೊಳಗಾದ ವ್ಯಕ್ತಿ.
ಈ ಘಟನೆನೆಯ ಕುರಿತಂತೆ ಬಾದರದಿನ್ನಿ ಪೋಲಿಸ್ ದೂರು ನೀಡಿದ್ದು ದೂರಿನಲ್ಲಿ “ನಾನು ಸುಭಾಸ ನಗರದ ಹಾಲಿನ ಅಂಗಡಿಯ ಹತ್ತಿರ ರಸ್ತೆಯ ಮೇಲೆ ಹೋಗುತ್ತಿರುವಾಗ ಐರಿನ ಕೋಂ ಫ್ರಾನ್ಸಿಸ್ ಡಿಸೋಜಾ ಮತ್ತು ಅವಳ ತಾಯಿ ಎಲಿಜಾ ಮೆಂಡಿಸ್ ರವರು ಒಂದು ಕೆಂಪು ಬಣ್ಣದ ಸ್ಕೂಟಿಯ ಮೇಲೆ ಬಂದು ಅಡ್ಡಗಟ್ಟಿ ನಿಲ್ಲಿಸಿ ಏಕಾ ಏಕಿ ಹಲ್ಲೆ ನಡೆಸಿದ್ದಾರೆ.
ಅದಲ್ಲದೆ ಬೆದರಿಕೆ ಹಾಕಿದ ಆರೋಪಿಗಳು ” ಏಯ್… ನಿನ್ನ ಹೆಂಡತಿ ಬ್ಲ್ಯಾಕ್ ಬ್ಯೂಟಿ ಎಲ್ಲಿ? ಅವಳು ಎಲ್ಲಿಂದ ಇನ್ನೂ ವಕೀಲ ವೃತ್ತಿ ಮಾಡುತ್ತಾಳೆ? ನಿಮ್ಮ ಇಬ್ಬರ ಜೀವನ ಹಾಳು ಮಾಡುತ್ತೇನೆ ಸೂ* ಮಗನೇ. ನಿನ್ನ ನಾನು ಬಿಡುವುದಿಲ್ಲ ” ಎಂದು ಜೀವದ ಬೆದರಿಕೆ ಹಾಕಿ ಕೆಳಗೆ ಕೆಡವಿ ಮರ್ಮಾಂಗಕ್ಕೆ ಒದ್ದು, ಇಬ್ಬರೂ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ನಾಗರಾಜ ಹೊನ್ನಪ್ಪ ಬಾದರದಿನ್ನಿ ದೂರು ನೀಡಿದ್ದಾರೆ.
ದಾಂಡೇಲಿ ಪೋಲಿಸ್ ರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
