Karwar| ಕಚೇರಿಯೊಂದಕ್ಕೆ ನುಗ್ಗಿ ಅಲ್ಲಿದ್ದ ಅಧಿಕಾರಿಯೊಬ್ಬರಿಗೆ ಜೀವ ಬೆದರಿಕೆ ಹಾಕಿ, ಸಿಬ್ಬಂದಿಗಳೊಂದಿಗೆ ಅನುಚಿತ ವರ್ತನೆ ತೋರಿದ ಮಹಿಳೆಯೊಬ್ಬಳ ಮೇಲೆ ಇಲ್ಲಿನ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಸೋನಾರವಾಡಾದ ಪದ್ಮಾ ಕೆ. ತಾಂಡೇಲ್ ಎಂಬ ಮಹಿಳೆಯ ಮೇಲೆ ದೂರು ದಾಖಲಾಗಿದೆ. ಇಲ್ಲಿನ ಎಂ.ಜಿ.ರಸ್ತೆಯಲ್ಲಿನ ಕರ್ನಾಟಕ ನೆವೆಲ್ ಯುನಿಟ್ ನ ಕ್ಯಾಂಪ್ ಕಚೇರಿಯ ಕಮಾಂಡಿಂಗ್ ಆಫೀಸರ್ ಸುಶಾಂತ್ ವತ್ಸ್ ದಯಾನಂದ ಶರ್ಮಾ ಎಂಬುವವರೇ ದೂರು ದಾಖಲಿಸಿದ್ದಾರೆ.
ಘಟನೆಯ ವಿವರ: ಜೂ. 5 ರಂದು ಸಂಜೆ 4.30 ಕ್ಕೆ ಎಂ.ಜಿ.ರಸ್ತೆಯಲ್ಲಿನ ಕರ್ನಾಟಕ ನೆವೆಲ್ ಯುನಿಟ್ ನ ಕ್ಯಾಂಪ್ ಕಚೇರಿಗೆ ಬಂದು ಕಮಾಂಡಿಂಗ್ ಆಫೀಸರ್ ಸುಶಾಂತ್ ವತ್ಸ್ ದಯಾನಂದ ಶರ್ಮಾ ಅವರಿಗೆ ಕೈ ಬೆರಳು ತೋರಿಸಿ `ನಿಮ್ಮ ಕಮಾಂಡೀಂಗ್ ಆಫೀಸರ್ ಎಲ್ಲಿದ್ದಾರೆ ಎಂದು ಏರು ಧ್ವನಿಯಲ್ಲಿ ಮಾತಾಡಿದ್ದಾರೆ. ನಂತರ ಕಚೇರಿ ಸಿಬ್ಬಂದಿಗಳಿಗೆ ‘ಸಬ್ ಕೋ ದೇಖ್ ಲುಂಗಿ’ ಎಂದು ಧಮಕಿ ಹಾಕಿ ಹೆದರಿಸಿದ್ದಾಳೆ. ಅಲ್ಲದೇ ಕಚೇರಿಯಲ್ಲಿದ್ದ ಸಿಬ್ಬಂದಿಗಳ ಜೊತೆ ಅನುಚಿತ ವರ್ತನೆ ತೋರಿದ್ದಾರೆ ಎಂದು ನೆವೆಲ್ ಯುನಿಟ್ ನ ಕ್ಯಾಂಪ್ ಕಚೇರಿಯ ಕಮಾಂಡಿಂಗ್ ಆಫೀಸರ್ ಸುಶಾಂತ್ ವತ್ಸ್ ದಯಾನಂದ ಶರ್ಮಾ ದೂರು ಶಹರ ಠಾಣೆಯಲ್ಲಿ ದಾಖಲಿಸಿದ್ದಾರೆ.
