Siddapur| ತಾಲೂಕಿನ ತ್ಯಾರ್ಸಿಯಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ, ಬೆಳ್ಳಿಯ ಆಭರಣ ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ತ್ಯಾರ್ಸಿ ಗ್ರಾಮದ ನಿವಾಸಿ ಉಮೇಶ ಮೈಲಾ ಗೊಂಡ ಎಂಬುವವರ ಮನೆಯೇ ಕಳ್ಳತನವಾಗಿದೆ. ನಿನ್ನೆ ಜೂನ್ 2ರಂದು ಬೆಳಗ್ಗೆ 9.45ರಿಂದ ಸಂಜೆ 4.30ರ ನಡುವಿನ ಅವಧಿಯಲ್ಲಿ ಕಳ್ಳರು ಮನೆಯ ಮುಂಭಾಗದ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿ, ಕಪಾಟಿನ ಬಾಗಿಲನ್ನು ಒಡೆದು, ಅದರಲ್ಲಿದ್ದ ಸೇಫ್ ಲಾಕರ್‌ನಿಂದ ಸುಮಾರು ₹1,65,100 ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ ₹1 ಲಕ್ಷ ನಗದು ಹಣವನ್ನು ಕಳವು ಮಾಡಿದ್ದಾರೆ. ಒಟ್ಟು ₹2.65 ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿ ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
