Ankola| ಇ‌ಲ್ಲಿನ ಮಟ್ಕಾ ಜೂಜಾಟದ ಅಡ್ಡೆ ಮೇಲೆ ಪೋಲಿಸರು ದಾಳಿ ನಡೆಸಿ, ಬುಕಿ ಸಹಿತ ವ್ಯಕ್ತಿಯೊಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಶೇಡಿಕುಳಿಯ ಕೊಲ್ಡ್ರಿಂಕ್ಸ್‌ ಅಂಗಡಿ ವ್ಯಾಪಾರಿ ಸಚಿನ್ ಕೃಷ್ಣಾ ನಾಯ್ಕ (29) ವರ್ಷ ಹಾಗೂ ಬುಕಿ ಬೆಳಾಬಂದರಿನ ದೇವಿದಾಸ ನಾಯ್ಕ ಎಂಬಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ.

ಪಟ್ಟಣದ ಅಂಬಾರಕೊಡ್ಲು ರಸ್ತೆಯ ಓಂ ಹೋಟೆಲ್‌ ಎದರು ಆರೋಪಿ ಸಚಿನ್‌ ನಾಯ್ಕ ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಕಟ್ಟಿಸಿಕೊಳ್ಳುತ್ತಿದ್ದಾಗ ಪೋಲಿಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿಯಿಂದ ನಗದು 4960 ಹಾಗೂ ಓಸಿ ಚೀಟಿ ಸೇರಿದಂತೆ ಜೂಗಾರಾಟದ ಸಾಮಗ್ರಿಗಳನ್ನು ಜಫ್ತಿ ಮಾಡಿದ್ದಾರೆ. ಪೋಲಿಸರು ತನಿಖೆ ಮಾಡಿದಾಗ ಓಸಿ ಹಣವನ್ನು ಬುಕಿ ಬೆಳಾಬಂದರಿನ ದೇವಿದಾಸ ನಾಯ್ಕ ಎಂಬಾತನಿಗೆ ನೀಡುತ್ತಿದೆ ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ. ಪೋಲಿಸರು ಇಬ್ಬರ ಮೇಲೂ ಪ್ರಕರಣ ದಾಖಲಿಸಿದ್ದಾರೆ.