ಕಾರವಾರ ತಾಲೂಕಿನ ಕಾಳಿ ನದಿ ಪಾತ್ರದಲ್ಲಿ ಅನಧಿಕೃತ ಮರಳುಗಾರಿಕೆ ನಿಯಂತ್ರಣಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಗಲು ರಾತ್ರಿ ಗಸ್ತು ಸಂಚಾರ ಸೇರಿದಂತೆ ವ್ಯಾಪಕ ಕಾರ್ಯಾಚರಣೆಗೆ ಮುಂದಾಗಿದೆ.

ಇವರೆಗೆ ಅನಧಿಕೃತ ಮರಳುಗಾರಿಕೆಯಿಂದ 2.6 ಲಕ್ಷ ದಂಡವನ್ನು ಸಂಗ್ರಹಿಸಿದೆ. ಸುಮಾರು 192 ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿದೆ.

ಇನ್ನು ಇತರೇ ಇಲಾಖೆಗಳ ವತಿಯಿಂದ ಒಟ್ಟು 17 ಪ್ರಕರಣಗಳಿಗೆ ಸಂಬಂಧಿಸಿದಂತೆ ರೂ.3.93 ಲಕ್ಷ ದಂಡ ವಸೂಲಿ ಮಾಡಿದೆ.

ಅನಧಿಕೃತ ಮರಳುಗಾರಿಕೆ ಚಟುವಟಿಕೆ ಸಂಬಂಧ ಸ್ವೀಕೃತವಾಗುವ ದೂರುಗಳನ್ನು ಪರಿಶೀಲಿಸಿ, ನಿಯಮಾವಳಿಯಂತರ ಕ್ರಮ ವಹಿಸಲಾಗುತ್ತಿದ್ದು, ನಿಯಮಿತವಾಗಿ ಹಗಲು ರಾತ್ರಿ ಗಸ್ತು ಸಂಚಾರ ಕೈಗೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ತಿಳಿಸಿದ್ದಾರೆ.