ಸಿದ್ದಾಪುರ : ಜನಗಣತಿ ಕಾರ್ಯದ ಮಾಹಿತಿ ನೀಡಲು ಸ್ಕೂಟರ್ ನಲ್ಲಿ ಬರುತ್ತಿದ್ದ ಶಿಕ್ಷಕಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರಸಿ  ಸಿದ್ದಾಪುರ ಮುಖ್ಯ ರಸ್ತೆಯ  ಕನ್ನಳ್ಳಿ (ಮಳವತ್ತಿ ) ಚೆಕ್ ಪೋಸ್ಟ್  ಬಳಿ ನಡೆದಿದೆ.

ಸಿರ್ಸಿ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ಕಟ್ಟಿಗೆ ತುಂಬಿದ ಟ್ರ್ಯಾಕ್ಟರ್ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ  ಘಟನೆ ಸಂಭವಿಸಿದೆ. ಪೂರ್ಣಿಮಾ ಭಟ್ (46) ಮೃತಪಟ್ಟ ದುರ್ದೈವಿ.ಇವರು ಪಟ್ಟಣದ ಹೊಸೂರ್ ನ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಟ್ರ್ಯಾಕ್ಟರ್  ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಅಪಘಾತಕ್ಕೆ ಕಾರಣನಾದ ಹಾವೇರಿ ಮೂಲದ ಟ್ರ್ಯಾಕ್ಟರ್  ಚಾಲಕ ಆಕಾಶ ಮಂಜಪ್ಪ ಬಾಲಣ್ಣನವರ್ ವಿರುದ್ಧ ದೂರು ದಾಖಲಾಗಿದೆ.