ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಕಮಲಾಕರ ಭಟ್ ಹಾಗೂ ಸುಚಿತ್ರಾ ಗ್ಯಾಂಗ್‌ನಿಂದ ನಡೆದ ಕೊಲೆ ಪ್ರಕರಣ ಸಂಬಂಧಿಸಿ ದಿನ ಕಳೆದಂತೆ ಒಂದೊಂದೇ ಎಕ್ಸ್‌ಕ್ಲೂಸಿವ್ ಮಾಹಿತಿ ಹೊರಬರುತ್ತಿದೆ.
ಸುಚಿತ್ರಾ ಪತಿ ಮಹೇಶ್ ಜಟ್ಯಾ ನಾಯ್ಕ್ ಖುದ್ದಾಗಿ ಪವಿತ್ರಾ ಹಾಗೂ ಕಮಲಾಕರ ಭಟ್ಟನ ಒಂದೊಂದೇ ಖತರ್ನಾಕ್ ಸ್ಟೋರಿ ಬಿಚ್ಚಿಟ್ಟಿದ್ದು, ನೋಡಿದವರಿಗೆ ಹೀಗೂ ಉಂಟೇ ಅನಿಸದಿರದು.
ಸಿದ್ಧಾಪುರ ಮೂಲದ ಮಹಿಳೆಯ ಮೂಲಕ ಕಮಲಾಕರ್ ಭಟ್ ಸಂಪರ್ಕಕ್ಕೆ ಬಂದಿದ್ದ ಸುಚಿತ್ರಾ, ಒಂದು ವಾರ ಕಮಲಾಕರ ಬಗ್ಗೆ ಸಂಪೂರ್ಣ ಸ್ಟಡಿ ಮಾಡಿದ್ದಳು.
ಮೊದಲು ಶಿರಳಗಿಯ ಪ್ರಕಾಶ್, ಗುಲ್ಬರ್ಗಾದ ಜಮೀನ್ದಾರ ಶರಣಬಸಪ್ಪ ಹಾಗೂ ಇತರರ ಜತೆ ಲವ್ವಿಡವ್ವಿ ಮಾಡಿಕೊಂಡಿದ್ದ ಸುಚಿತ್ರಾ, ನಂತರ ಕಮಲಾಕರ ಭಟ್ ಜತೆ ಆಪ್ತತೆ ಬೆಳೆಸಿಕೊಂಡು, ಮೊದಲು ಸುಮಾರು 1ರಿಂದ 2 ಲಕ್ಷ ರೂ. ಹಣಕ್ಕಾಗಿ ಆತನ ಜತೆ ** ಮಾಡಿದ್ದಳು.
ಅಲ್ಲದೇ, ಆತನ ಜತೆಗಿನ ಖಾಸಗಿ ವಿಡಿಯೋ ರೆಕಾರ್ಡ್ ಕೂಡಾ ಮಾಡಿಕೊಂಡಿದ್ದಳು ಎನ್ನಲಾಗಿದೆ. ಕಮಲಾಕರ್ ಭಟ್ಟನ ಐಷಾರಾಮಿ ಜೀವನ ನೋಡಿದ ಬಳಿಕ ** ವಿಡಿಯೋ ಮೂಲಕ ಆತನನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದಳು.
ಮಕ್ಕಳ ಜತೆ ನಾನು ನಿನ್ನ ಜತೆಯಿರಲು ಬರ್ತೇನೆ. ನನ್ನ ಚೆನ್ನಾಗಿ ನೋಡಿಕೊಳ್ಳದಿದ್ರೆ ಮರ್ಯಾದೆ ತೆಗೆತೀನಿ ಅಂದಿದ್ದಳು ಎಂಬ ಆರೋಪ ಕೇಳಿಬಂದಿದೆ. ಮೊದಲೇ ಚೂರುಪಾರು ಖ್ಯಾತಿ ಪಡೆದಿದ್ದ ಜ್ಯೋತಿಷಿ ಕಮಲಾಕರ್ ಭಟ್ ಮರ್ಯಾದೆಗೆ ಅಂಜಿ ಆಕೆಯನ್ನು ಜತೆಗೆ ಇರಿಸಿಕೊಂಡಿದ್ದ. ಅಲ್ಲದೇ, ಗುಪ್ತವಾಗಿ ಆಕೆಯನ್ನು ಮದುವೆಯಾಗಿದ್ದ.
ಸುಚಿತ್ರಾ ಳನ್ಮು ಕಮಲಾಕರನಿಗೆ ಪರಿಚಯಿಸಿದ ಶಿರಸಿ ಮೂಲದ ಮಹಿಳೆ ಕಮಲಾಕರನಿಗೆ ಆಕೆಯ ಸಹವಾಸ ಮಾಡಬೇಡಿ ಅಂತಾ ಹಲವು ಬಾರಿ ಹೇಳಿದ್ದಳು. ಆದರೆ, ಕಮಲಾಕರ ಮಾತ್ರ ಸುಮಾ ಹೇಳಿದ್ದನ್ನ ಸುಚಿತ್ರಾಗಳ ಬಳಿ ತಿಳಿಸಿ ಸುಮಾಳಿಗೆ ಕ್ಲಾಸ್ ತೆಗೆದುಕೊಳ್ಳುವಂತೆ ಮಾಡಿದ್ದ.
ಅಲ್ಲದೇ, ಸುಚಿತ್ರಾ, ಸುಮಾಳ ಜೀವನಕ್ಕೂ ಹುಳಿ ಹಿಂಡಿದ್ದಳು. ಇನ್ನು ಜ್ಯೋತಿಷಿ ಕಮಲಾಕರ್ ಭಟ್ ಪ್ರಣಯ ಪ್ರಸಂಗ ಕೂಡಾ ಸಾಮಾನ್ಯದ್ದೇನಲ್ಲ. ಕಮಲಾಕರ್ ಭಟ್ ಗೆ ಒಂದಲ್ಲ, ಎರಡಲ್ಲಾ ಬರೋಬ್ಬರಿ ನಾಲ್ಕು ಮಹಿಳೆಯರ ಜತೆ ವಿವಾಹವಾಗಿದೆ. ಮೊದಲ ಮದುವೆಯಲ್ಲಿ ಪತ್ನಿ ಒಂದೇ ವಾರದೊಳಗೆ ಕಮಲಾಕರ್ ಭಟ್‌ನನ್ನು ಬಿಟ್ಟುಹೋಗಿದ್ರೆ, ನಂತರ ಕುಟುಂಬದವರು ಮಾಡಿಸಿದ ಮತ್ತೊಂದು ವಿವಾಹದಿಂದ ಈಕೆಗೊಂದು ಹೆಣ್ಣು ಮಗಳಿದ್ದಾಳೆ. ಅನಾರೋಗ್ಯದ ಕಾರಣದಿಂದ ಎರಡನೇ ಪತ್ನಿ ಸಾವಿಗೀಡಾದ ಬಳಿಕ ಸಾಗರದ ವಿವೇಕ ನಗರದ ತಸ್ಮ ಸಾಬ್ ಎಂಬಾಕೆಯನ್ನು ಸೀಕ್ರೆಟ್ ಆಗಿ ವಿವಾಹವಾಗಿದ್ದ ಕಮಲಾಕರ್ ಭಟ್. ಅದಾಗ್ಯೂ ಸುಚಿತ್ರಾ ಜತೆ ಕಮಲಾಕರ ಭಟ್ಟ ರೊಮ್ಯಾನ್ಸ್ ಪ್ರಾರಂಭಿಸಿದ್ದಲ್ಲದೇ,
ಸುಚಿತ್ರಾ ಜೊತೆ ಸಂಬಂಧದ ಬಳಿಕ ಮುಸ್ಲಿಂ ಪತ್ನಿ ಜೊತೆ ವಿರಸವಾಗಿತ್ತು. ಈ ಕಡೆಗೆ ಸುಚಿತ್ರಾಳಿಗೆ ತಸ್ಮ ಸಾಬ್ ಸಂಬಂಧ ಗೊತ್ತಾಗುತ್ತಿದ್ದಂತೆ ಕಮಲಾಕರ್ ಭಟ್ ಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಳು. ಇದರಿಂದ ಬೇಸತ್ತ ಭಟ್ಟ, ಸುಚಿತ್ರಾ ಎದುರಲ್ಲೇ ವಾಯ್ಸ್ ಮೆಸೇಜ್ ಮಾಡಿ ತಾಸ್ಮಗೆ ಧಮ್ಕಿ ಹಾಕಿ ತರಾಟೆ ತೆಗೆದುಕೊಂಡಿದ್ದ.
ತಸ್ಮ ಮಾತ್ರ ತನಗೆ ಕಮಲಾಕರನೇ ಬೇಕು ಅಂತಾ ಎಂದು ಹಠ ಹಿಡಿದು, ತಮ್ಮ ಸಂಬಂಧದ ಬಗ್ಗೆ ವಿಡಿಯೋ ಮಾಡಿಟ್ಟುಕೊಂಡು ದೂರು ದಾಖಲಿಸಲು ಮುಂದಾಗಿದ್ದಳು. ಇದರಿಂದ ಮರ್ಯಾದೆ ಹೋಗುವ ಭಯದಲ್ಲಿ ಬೆಂಗಳೂರಿನ ಕಾವ್ಯ ಗೌಡ ಎಂಬಾಕೆಯ ನೇತೃತ್ವದಲ್ಲಿ
ತಸ್ಮಾಳನ್ನು ಕರೆಯಿಸಿ ಶಿವಮೊಗ್ಗದಲ್ಲಿ 50 ಲಕ್ಷ ರೂ. ನೀಡಿ ಸೆಟ್ಲ್‌ಮೆಂಟ್ ಮಾಡಿಕೊಂಡಿದ್ದ ಈ ಕಮಲಾಕರ್ ಭಟ್ಟ. ನಂತರ ಸುಚಿತ್ರಾಳನ್ನು ಕೂಡಾ ಸೀಕ್ರೆಟ್ ಆಗಿ ಮದುವೆಯಾಗಿದ್ದ ಈ ಭಟ್ಟ, ಆಕೆಯ ಕುತ್ತಿಗೆಗೆ ದೊಡ್ಡ ಕರಿಮಣಿ ಮಾಲೆ ಹಾಕಿದ್ದ. ಅಲ್ಲದೇ, ತನ್ನ ಎರಡು ಉಂಗುರಗಳ ಪೈಕಿ ಒಂದನ್ನು ಆಕೆಗೆ ನೀಡಿದ್ದ. ಇನ್ನು ಹೋಮ, ಹವನಗಳನ್ನು ಮಾಡುವಾಗಲೂ ಸುಚಿತ್ರಾ ಕೈ ಹಿಡಿದುಕೊಂಡೇ ಪೂರ್ಣಹುತಿ ನೀಡುತ್ತಿದ್ದ ಈ ಕಮಲಾಕರ್, ಇಂದು ಜೈಲಿನಲ್ಲಿ ಇತರ ಆರೋಪಿಗಳ ಜತೆ ಕಂಬಿ ಎಣಿಸುತ್ತಾ ಯಾಕಾಗಿ ಸುಚಿತ್ರಾಳ ಸಹವಾಸ ಮಾಡಿದ್ನೋ ಅಂತಾ ಕಣ್ಣೀರು ಹಾಕಿ ಕುಳಿತಿದ್ದಾನೆ.
