Karwar| ಶಿರಸಿಯ ಪ್ಲಾಂಟರ್ಸ್ ರಿಕ್ರಿಯೇಶನ್ ಅಸೋಸಿಯೇಶನ್ (ರಿ.) ಸಂಘದ ಬೈಲಾ ನಿಯಮಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಸಂಘದ ನೋಂದಣಿ ರದ್ದತಿ ಪ್ರಕ್ರಿಯೆಗೆ ಸಹಕಾರ ಸಂಘಗಳ ಇಲಾಖೆ ಮುಂದಾಗಿದೆ.
ನೋಂದಣಿ ರದ್ದತಿಗೆ ಮುನ್ನ ಸಂಘದ ಆಡಳಿತ ಮಂಡಳಿಗೆ ತಮ್ಮ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗಿದ್ದು, ಈ ಸಂಬಂಧ ಕಚೇರಿಯಿಂದ ದಿನಾಂಕ 5-5-2026 ಹಾಗೂ 19-5-2026 ರಂದು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ನಿಗದಿತ ವಿಚಾರಣೆಗೆ ಸಂಘದ ಪ್ರತಿನಿಧಿಗಳು ಗೈರು ಹಾಜರಾಗಿದ್ದಾರೆ ಎಂದು ತಿಳಿಸಲಾಗಿದೆ.
ಪ್ರಕಟಣೆ ಪ್ರಕಟವಾದ ದಿನದಿಂದ ಮೂರು ದಿನಗಳ ಒಳಗಾಗಿ ಸಂಘದ ಆಡಳಿತ ಮಂಡಳಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಹಬ್ಬುವಾಡ ರಸ್ತೆ, ಕಾರವಾರ ಇಲ್ಲಿಗೆ ಸಂಪರ್ಕಿಸಿ ತಮ್ಮ ಅಹವಾಲು ಸಲ್ಲಿಸುವಂತೆ ಸೂಚಿಸಲಾಗಿದೆ. ನಿಗದಿತ ಅವಧಿಯಲ್ಲಿ ಅಹವಾಲು ಸಲ್ಲಿಸದಿದ್ದಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಅನ್ವಯ ಸಂಘದ ನೋಂದಣಿ ರದ್ದತಿಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
