Towards a drug-free Karnataka; Karnataka Police Run – 2026|

Karwar| ಮಾದಕ ದ್ರವ್ಯ ಮುಕ್ತ ಕರ್ನಾಟಕ್ಕಾಗಿ ಪೋಲಿಸ್ ಇಲಾಖೆಯ ವತಿಯಿಂದ ಕರ್ನಾಟಕ ಪೋಲಿಸ್ ಓಟ -2026 ನ್ನು‌ ಕಾರವಾರದಲ್ಲಿ ಹಮ್ಮಿಕೊಳ್ಳಲಾಗಿದೆ.

‘ನಮ್ಮ ಪೊಲೀಸ್ – ನಮ್ಮ ಹೆಮ್ಮೆ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಈ ಓಟ ಹಮ್ಮಿಕೊಳ್ಳಲಾಗಿದೆ. ಇದು 3 ನೇ ಆವೃತ್ತಿಯ ಕರ್ನಾಟಕ ಪೊಲೀಸ್ ಓಟ -2026 (5K/10K) ಆಗಿದ್ದು, ಮಾ.1 ರಂದು ಬೆಳಗ್ಗೆ 6.30ಕ್ಕೆ ಕಾರವಾರದ ರವೀಂದ್ರನಾಥ ಟಾಗೋರ್ ಬೀಚ್ ನಿಂದ ಪ್ರಾರಂಭವಾಗಲಿದೆ‌.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕರ್ನಾಟಕ ಪೋಲಿಸ್ ಓಟ -2026 ರಲ್ಲಿ ಪಾಲ್ಗೊಳ್ಳುವಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ಇಲಾಖೆ ತಿಳಿಸಿದೆ.