ಕಾರವಾರ: ಅಪ್ರಾಪ್ತೆ ಬಾಲಕಿಯೋರ್ವಳು ಕಿಟಕಿಯ ಸರಳಿಗೆ ವೇಲ್ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ಬಾಲಕಿಯರ‌ ಬಾಲಮಂದಿರದಲ್ಲಿ ನಡೆದಿದೆ.

ಕಾರವಾರದ ಸ್ವೀಕಾರ ಕೇಂದ್ರದಲ್ಲಿರುವ ಬಾಲಕಿಯರ ಬಾಲಮಂದಿರದಲ್ಲಿ ಮಧ್ಯಾಹ್ನದ ವೇಳೆ ಈ ಘಟನೆ ನಡೆದಿದ್ದು, ಕೂಡಲೇ ಬಾಲಕಿಯನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸ್ಥಳಕ್ಕೆ ಕಾರವಾರ ನಗರ ಠಾಣಾ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಈಕೆ ಪೋಕ್ಸೋ ಪ್ರಕರಣವೊಂದರ ಸಂತ್ರಸ್ತೆ ಎಂದು ತಿಳಿದುಬಂದಿದ್ದು, ಕಳೆದ ಅಗಸ್ಟ್ ತಿಂಗಳಿಂದ ಬಾಲಕಿಯರ ಬಾಲಮಂದಿರದಲ್ಲೇ ಆಶ್ರಯ ಪಡೆದಿದ್ದಳು.

ಈಕೆಗೆ ಕಳೆದ ನವೆಂಬರ್‌ನಲ್ಲಿ ಧಾರವಾಡ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೂಡಾ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿದೆ.