Ankola| ಕಾರ್ ನಲ್ಲಿ ಬಂದ ಆರು ಮಂದಿ ದುಷ್ಕರ್ಮಿಗಳು ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ನಾಯಕ ಅವರಿಗೆ ಚಾಕು ಇರಿದಿರುವ ಘಟನೆ ಅಂಕೋಲಾದ ಕಣಕಣೇಶ್ವರ ದೇವಸ್ಥಾನದ ಬಳಿ ನಡೆದಿದೆ.

ಗೋವಾ ನೊಂದಣಿಯ ಕಾರ್ GA05 D0338 ಮೇಲೆ ಬಂದ ಆರು ಮಂದಿ ದುಷ್ಕರ್ಮಿಗಳ ತಂಡ ಗೋಪಾಲ ಕೃಷ್ಣ ನಾಯಕ ಅವರು ತಮ್ಮ ಕಾರ್ ನಿಂದ ಇಳಿದು ದೇವಸ್ಥಾನಕ್ಕೆ ಹೋಗು ವೇಳೆ ಅವರನ್ನ ಹಿಂಬಾಲಿಸಿ ಬಂದು ಚಾಕು ಇರಿದಿದ್ದಾರೆನ್ನಲಾಗಿದೆ. ತಕ್ಷಣ ಅವರು ಸಮೀಪದಲ್ಲಿದ್ದ ಬ್ಯಾಂಕ್ ಒಂದರೊಳಗೆ ಹೋಗಿ ಬಾಗಿಲು ಹಾಕಿಕೊಂಡು, ತಮ್ಮ ಜೀವ ಉಳಿಸಿಕೊಂಡರೆನ್ನಲಾಗಿದೆ.
ಸದ್ಯ ಈ ಅಪರಿಚಿತ ದುಷ್ಕರ್ಮಿಗಳು ಪರಾರಿಯಾಗಿದ್ದಾರೆನ್ನಲಾಗಿದೆ. ಕೆಲ ಪ್ರಾಥಮಿಕ ಮಾಹಿತಿ ಪ್ರಕಾರ ಈ ದುಷ್ಕರ್ಮಿಗಳ ಗ್ಯಾಂಗ್ ಕಳೆದ ಮೂರು ದಿನಗಳಿಂದ ಅಂಕೋಲಾ ಪಟ್ಟಣದ ಹೊಟೇಲ್ ಒಂದರಲ್ಲಿ ವಾಸ್ತವ್ಯ ಇದ್ದರೆನ್ನಲಾಗಿದೆ.
ಗಾಯಗೊಂಡ ಗೋಪಾಲಕೃಷ್ಣ ನಾಯಕ ಅವರನ್ನು ಅಂಕೋಲಾದ ಅವಿನಾಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.
ಇನ್ನು ಈ ಅಪರಿಚಿತ ದುಷ್ಕರ್ಮಿಗಳ ಪತ್ತೆಗಾಗಿ ಅಂಕೋಲಾ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ದೀಪನ್ ಎಂ.ಎನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
