Bhatkal| ಸಮುದ್ರದಲ್ಲಿ ಈಜಾಡಲು ಹೋಗಿದ್ದ ಇಬ್ಬರು ಯುವಕರು ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿ ನಸ್ತಾರ್ ಕಡಲತೀರದಲ್ಲಿ ನಡೆದಿದೆ.
ಮೃತರನ್ನು ಉತ್ತರ ಪ್ರದೇಶ ಮೂಲದ ಮಹಮ್ಮದ್ ಅಪ್ರೋಜ್ (34) ಹಾಗೂ ರಿಜ್ವಾನ್ ಸಾಕಿರ್ (27) ಎಂದು ಗುರುತಿಸಲಾಗಿದೆ. ಇವರು ಭಟ್ಕಳದ ಗಾರ್ಮೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಬುಧವಾರ ಮಧ್ಯಾಹ್ನ ಏಳು ಜನರ ತಂಡದೊಂದಿಗೆ ಕಡಲಿಗೆ ಇಳಿದಿದ್ದ ವೇಳೆ ಏಕಾಏಕಿ ಬಂದ ಭಾರೀ ಅಲೆಗಳಿಂದ ಇಬ್ಬರು ನೀರಲ್ಲಿ ಕೊಚ್ಚಿಹೋಗಿದ್ದಾರೆ. ಸ್ಥಳೀಯರಾದ ಸೌದ್ ಗವಾಯಿ ಹಾಗೂ ಸಾಜಪ್ ಅವರ ಸಾಹಸದಿಂದ ಐವರು ಯುವಕರನ್ನು ರಕ್ಷಿಸಲಾಗಿದೆ.
ಮೃತ ದೇಹವನ್ನು ಮರಣೋತ್ತರ ಪರಿಕ್ಷೆಗಾಗಿ ಭಟ್ಕಳ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
