Kumta| ಸಮುದ್ರದಲ್ಲಿ ಈಜಲು ತೆರಳಿದ ಪ್ರವಾಸಿಗನೊಬ್ಬ ಮುಳುಗಿ ಸಾವನ್ನಪ್ಪಿದ ಘಟನೆ ಕುಮಟಾದ ಬಾಡ ಗ್ರಾಮದ ಕಡ್ಲೆ ಸಮುದ್ರ ತೀರದಲ್ಲಿ ಸೋಮವಾರ ನಡೆದಿದೆ.

ಪೂನಾ ಮೂಲದ ಜೀವನ ಭಟ್ಟ ರೈ (26) ಈಜಲು ತೆರಳಿ ಮೃತಪಟ್ಟ ದುರ್ದೈವಿ. ಮೃತ ಜೀವನ ತನ್ನ ಮೂವರು ಸ್ನೇಹಿತರ ಜೊತೆ ಕಡ್ಲೆಯ ಬ್ಲೂ ವೇವ್ಸ್ ರೇಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಸೋಮವಾರ ಬೆಳಿಗ್ಗೆ ಸಮುದ್ರದಲ್ಲಿ ಈಜಲು ಹೋಗಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
