ಶಿರಸಿ | ಚಿತ್ರನಟ ಸಂಕೇತ್ ಮೇಸ್ತಾ ಗುಂಪಿನ ದಾಳಿಗೆ ಏಳುಜನ ಅಮಾಯಕರು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ನಡೆದಿದೆ.

ನಿನ್ನೆ ರಾತ್ರಿ ಶಿರಸಿಯ ರಾಮನಬೈಲಿನ ಸುಮಾರು 20 ಜನರ ಗುಂಪೊಂದು ತೇರನಗಳ್ಳಿ ಗ್ರಾಮದ ತುಕಾರಾಮ ನಾಯ್ಕ ಕುಂಟುಂಭದವರ ಮೇಲೆ ಮಾರಣಾಂತಿಕ ದಾಳಿ‌ ನಡೆಸಿದ್ದಾರೆ.

ದಾಳಿಯ ನೇತ್ರತ್ವ ಚಿತ್ರನಟ ಸಂಕೇತ್ ಮೇಸ್ತಾ ಹೊತ್ತಿದ್ದು ದಾಳಿಕೋರರು ಕಬ್ಬಿಣದ ರಾಡು ಹಾಗೂ ಪಂಚ್ ಅನ್ನು ಬಳಸಿ ತುಕಾರಾಮ ನಾಯ್ಕ ಕುಟುಂಬದವರ ಮೇಲೆ ಎರಗಿದ್ದಾರೆ.

ಕಾರು ,‌ ರಿಕ್ಷಾ ಹಾಗೂ ಬೈಕ್ ನಲ್ಲಿ ಬಂದ ಆಮತುಕರು ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿದ್ದು ಏಳು ಜನರಿಗೆ ಗಂಭೀರ ಗಾಯವಾಗಿದೆ. ಇನ್ನೂ ಈ ಹೊಡೆದಾಟ ಹಣ ದ ವಿಚಾರವಾಗಿ ನಡೆದಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ತೆರಕನಹಳ್ಳಿಯ ತುಕಾರಾಮ ನಾಯ್ಕ, ಸುನೀಲ ನಾಯ್ಕ, ರೇಖಾ ನಾಯ್ಕ , ಸುಭಾಸ ನಾಯ್ಕ, ಕವಿತಾ ನಾಯ್ಕ, ಸುಮನಾ ಸುಭಾಸ ನಾಯ್ಕ ಅವರಿಗೆ ಗಂಭೀರ ಗಾಯವಾಗಿದ್ದು ಗಾಯಾಳುಗಳು ಶಿರಸಿಯ ತಾಲೂಕು‌‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಆರೋಪಿಗಳಾದ ಸಂಕೇತ ಮೇಸ್ತ, ನಾಗರಾಜ ಮೇಸ್ತ, ಜನ್ನು ಮೇಸ್ತ, ಪ್ರಥ್ವಿ ಶಿವರಾಜ, ಶಿವರಾಜ, ಗಗನ ಮೇಸ್ತ, ಶರತ ಮೇಸ್ತ, ರಫಿಕ ಸೇರಿದಂತೆ ಇನ್ನಿತರರ ಮೇಲೆ ಶಿರಸಿ ಗ್ರಾಮೀಣ ಠಾಣೆಯಲ್ಲು ಪ್ರಕರಣ ದಾಖಲಾಗಿದೆ. ಸಿನಿಮಾದಲ್ಲಿ ವಿಲನ್ ಆಗಿದ್ದ ಸಂಕೇತ್ ಮೇಸ್ತಾ ರಿಯಲ್ ಲೈಪ್ ನಲ್ಲೂ ವಿಲನ್ ಆಗಿದ್ದಾರೆ.