Karwar| ಇಲ್ಲಿನ ಜನನ ನಿಬಿಡ ರಸ್ತೆಯಲ್ಲಿರುವ ಬಿಎಸ್ಎನ್ಎಲ್ ಕಚೇರಿಗೆ ಕಳ್ಳರು ನುಗ್ಗಿ ಎರಡು ಬ್ಯಾಟರಿ ಹೊತ್ತೊಯ್ದಿದ್ದಾರೆ.

ನಗರದಲ್ಲಿರುವ ಬಿಎಸ್ಎನ್ಎಲ್ ಕಚೇರಿಯ ಬಾಗಿಲಿನ ಕೊಂಡಿಯನ್ನು ಮುರಿದು ಒಳ‌ನುಗ್ಗಿದ ಕಳ್ಳರು, ಕಛೇರಿಯ ಒಳಗಡೆ ಇಟ್ಟಿದ್ದ Exide ಕಂಪನಿಯ ಎರಡು ಬ್ಯಾಟರಿಯನ್ನು ಕಳವು ಮಾಡಿದ್ದಾರೆ‌. ಈ ಎರಡು ಬ್ಯಾಟರಿಯ ಮೌಲ್ಯ 28 ಸಾವಿರ‌ ಎಂದು ಅಂದಾಜಿಸಲಾಗಿದೆ‌. ಮೇ.1ರ ರಾತ್ರಿ ಒಂಬತ್ತು ಗಂಟೆಯಿಂದ ಮೇ.2ರ ಬೆಳಗ್ಗೆ 10ಗಂಟೆಯ ನಡುವೆ ಈ ಬ್ಯಾಟರಿ ಕಳ್ಳತನವಾಗಿದೆ.

ಬಿಎಸ್ಎನ್ಎಲ್ ಕಚೇರಿಯ ಕಿರಿಯ ದೂರ ಸಂಪರ್ಕ ಅಧಿಕಾರಿ ಕಳ್ಳತನದ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.