ಕಾರವಾರ: ಈಗಾಗಲೇ ಎಸ್ಸೆಸ್ಸಲ್ಸಿ ಪರೀಕ್ಷೆ ವೇಳಾಪಟ್ಟಿ ಮಾ.18 ರಿಂದ ಏ.2 ರವರೆಗೆ ಪ್ರಕಟಿಸಲಾಗಿದ್ದು, ಸದರಿ ವೇಳಾಪಟ್ಟಿಯನ್ವಯ ತೃತಿಯ ಭಾಷೆ ಪರೀಕ್ಷೆಯನ್ನು ಮಾ. 30 ರಂದು ನಿಗದಿಪಡಿಸಲಾಗಿತ್ತು.

ಆದರೆ ಸರ್ಕಾರದ ಅಧಿಸೂಚನೆ ಅನ್ವಯ ಮಹಾವೀರ ಜಯಂತಿ ಪ್ರಯುಕ್ತ ಘೋಷಿಸಲಾಗಿರುವ ಸಾರ್ವತ್ರಿಕ ರಜಾ ದಿನವನ್ನು ಮಾ.31 ಮಂಗಳವಾರ ಬದಲಾಗಿ ಮಾ.30 ಸೋಮವಾರ ಎಂದು ಮಾರ್ಪಡಿಸಿ ಆದೇಶಿಸಲಾಗಿದೆ.

 ಈ ಸಂಬಂಧ ಮಾ. 30 ರಂದು ನಿಗಧಿಪಡಿಸಲಾಗಿದ್ದ ತೃತಿಯ ಭಾಷೆ ಪರೀಕ್ಷೆಯು ಮಾ.31 ರ ಮಂಗಳವಾರ ನಿಗಧಿಪಡಿಸಿದ ಅವಧಿಯಲ್ಲಿ ನಡೆಸಲಾಗುವುದು. ಉಳಿದ ವಿಷಯದ ಪರೀಕ್ಷೆಗಳು ವೇಳಾ ಪಟ್ಟಿಯಂತೆ ಯಥಾವತ್ತಾಗಿ ನೆಡೆಯುವುದು ಎಂದು ಕ.ಶಾ.ಪ.ಮೌ ಮಂಡಳಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.