Siddapur|ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ವಸಂತ ನಾಯ್ಕ್ ಕೊಲೆ ಪ್ರಕರಣದ ಎಂಟು ಮಂದಿ ಆರೋಪಿಗಳ ಪೈಕಿ ಸಿದ್ದಾಪುರ ಜೆ.ಎಮ್.ಎಫ್.ಸಿ ನ್ಯಾಯಾಲಯವು 5 ಮಂದಿ ಆರೋಪಿಗಳಿಗೆ ಫೆ. 21 ರ ವರೆಗೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿದೆ. ಇದರ ಜತೆ ಮೂವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಸಿದ್ದಾಪುರದ ವಸಂತ ನಾಯ್ಕ್ ಕೊಲೆ ಪ್ರಕರಣದಲ್ಲಿ ಈವರೆಗೆ ಆರೋಪಿಗಳಾದ ಕಮಲಾಕರ ಭಟ್ ಹಾಗೂ ಸುಚಿತ್ರಾ ಸೇರಿದಂತೆ ಎಂಟು ಜನ ಜೈಲು ಪಾಲಾಗಿದ್ದಾರೆ.
ಅಕ್ರಮ ಸಂಬಂಧದ ಹಿನ್ನೆಲೆ ಸಿದ್ದಾಪುರದಲ್ಲಿ ನಡೆದ ಕೊಲೆ ಪ್ರಕರಣದ 8 ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇಂದು ಫೈಸಲ್, ಮೆಹಫೂಸ್ ಹಾಗೂ ಇರ್ಫಾನ್‌ರನ್ನು ಪೊಲೀಸರು ನ್ಯಾಯಾಯಲಕ್ಕೆ ಹಾಜರುಪಡಿಸಿದ ಬಳಿಕ ಶಿವಮೊಗ್ಗಕ್ಕೆ ಮಹಜರು ಹಾಗೂ ಕೊಲೆಗೆ ಬಳಸಿದ ಆಯುಧ ಸೀಝ್ ಮಾಡಲು ಕರೆದೊಯ್ದಿದ್ದರು. ಉಳಿದಂತೆ 5 ಮಂದಿ ಆರೋಪಿಗಳಾದ ಸುಚಿತ್ರಾ, ಲೋಕನಾಥ, ಕಮಲಾಕರ್ ಭಟ್, ಆಕಾಶ್ ಹಾಗೂ ವಿನಯ್‌ಗೆ ಕಾರವಾರ ಜಿಲ್ಲಾ ಕಾರಾಗ್ರಹದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಅಂದಹಾಗೆ, ಫೆಬ್ರವರಿ 2 ರಂದು ಸಿದ್ದಾಪುರದ ವಸಂತ ಜಟ್ಯಾ ನಾಯ್ಕ (41 ವರ್ಷ) ಎಂಬವರನ್ನು ತಮ್ಮನ ಪತ್ನಿ ಸುಚಿತ್ರಾ ನಾಯ್ಕ ಹಾಗೂ ಸುಚಿತ್ರಾ ತಂದೆ ಲೋಕನಾಥ ನಾಯ್ಕ್, ಜ್ಯೋತಿಷಿ ಕಮಲಾಕರ ಭಟ್, ಆಕಾಶ್, ಫೈಸಲ್, ಮೆಹಫೂಸ್, ಇರ್ಫಾನ್ ಅಮಾನುಲ್ಲಾ ಹಾಗೂ ವಿನಯ್ ಸೇರಿ ಕೊಲೆ ಮಾಡಿದ್ದರು.
ಈ ಗಲಾಟೆಯಲ್ಲಿ ಸುಚಿತ್ರ ಪತಿ ಮಹೇಶ ಜಟ್ಯಾ ನಾಯ್ಕ (37 ವರ್ಷ) ಹಾಗೂ ನೆರೆಮನೆಯ ಕುಮಾರ್ ನಾರಾಯಣ್ ನಾಯ್ಕ್ (35) ಎಂಬವರಿಗೂ ಗಂಭೀರ ಗಾಯವಾಗಿತ್ತು.
ಘಟನೆಯ ಕುರಿತಂತೆ ಮೃತ ವಸಂತ ನಾಯ್ಕ ಪತ್ನಿ ಸಂಧ್ಯಾ ನಾಯ್ಕ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೊಲೆ ನಡೆದ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದ ಸಿದ್ದಾಪುರ ಪೋಲಿಸರು ಸಿದ್ಧಾಪುರ ಜೆಎಂಎಫ್‌ಸಿ (JMFC) ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಅಂದು ನ್ಯಾಯಾಲಯವು ಎಲ್ಲಾ ಅರೋಪಿಗಳನ್ಮು 8 ದಿನದ ನ್ಯಾಯಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತ್ತು. ನ್ಯಾಯಾಂಗ ಬಂಧನದ ಅವಧಿ ಮುಗಿದ ನಂತರ ಇಂದು 3 ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಉಳಿದ ಆರೋಪಿಗಳನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರು ಪಡಿಸಲಾಗಿತ್ತು. ಇವರ ಪೈಕಿ ಪೈಸಲ್, ಮಹಪೂಸ್, ಹಾಗೂ ಇರ್ಫನ್ ಗೆ 13 ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಉಳಿದಂತೆ ಸುಚಿತ್ರಾ, ಲೋಕನಾಥ, ಕಮಲಾಕರ ಭಟ್, ಆಕಾಶ್ ಮತ್ತು ವಿನಯ್ ಗೆ ಫೆ.21 ರ ವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಲಾಗಿದೆ.
