Karwar|Olive Ridley Turtles

ಕಾರವಾರ ತಾಲೂಕಿನ ‌ಬಾವಳದಲ್ಲಿ ಕಡಲಾಮೆ ಮೊಟ್ಟೆಯಿಂದ ಹೊರ ಬಂದ 66 ಮರಿಗಳನ್ನು ಗುರುವಾರ ಸುರಕ್ಷಿತವಾಗಿ ಕಡಲಿಗೆ ಸೇರಿಸಲಾಯಿತು.

ಪ್ರತಿ ವರ್ಷ ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಕಡಲಾಮೆಯ ಸಂತಾನ್ಪೋತ್ಪತ್ತಿಯ ಸಮಯವಾಗಿದ್ದು, ಈ ಭಾಗದ ಕಡಲತೀರದಲ್ಲಿ ಮೊಟ್ಟೆ ಇಟ್ಟು ಮುಚ್ಚಿ ತೆರಳುತ್ತದೆ. ನಂತರ ಇದನ್ನು ಅರಣ್ಯ ಇಲಾಖೆ ಗುರುತಿಸಿ ಸಂರಕ್ಷಣೆ ಮಾಡಿ ಮರಿ ಹೊರ ಬಂದ ನಂತರ ಕಡಲಿಗೆ ಬಿಡುವ ಪರಿಪಾಠ ನಡೆದುಕೊಂಡು ಬಂದಿದೆ.

ಅದರಂತೆ ಗೂಡಿನಿಂದ ಒಟ್ಟು 66 ಮರಿಗಳು ಹೊರಬಂದಿದ್ದು, ಎಲ್ಲ ಮರಿಗಳನ್ನು ಇಂದು ಸುರಕ್ಷಿತವಾಗಿ ಬಾವಳದ ಕಡಲಿಗೆ ಬಿಡಲಾಯಿತು.

ಈ ಸಂದರ್ಭದಲ್ಲಿ ಕಾರವಾರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ.ನಾಯ್ಕ, ವಲಯ ಅರಣ್ಯಾಧಿಕಾರಿಗಳು, ವಿಧ್ಯಾರ್ಥಿಗಳು, ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.