ದಾಂಡೇಲಿ| ಗ್ಲಾಸ್ ವಾಸನೆಯ ಮೇಲೆ ವ್ಯಕ್ತಿಯೊಬ್ಬ ಮದ್ಯ ಸೇವನೆ ನಡೆಸುತ್ತಿದ್ದ ಎಂಬುದನ್ನು ಕಂಡು ಹಿಡಿದು ಆತನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಪ್ರಕರಣವನ್ನು ಪೋಲಿಸರು ದಾಖಲಿಸಿದ ಘಟನೆ ಅಂಬಿಕಾನಗರದಲ್ಲಿ ನಡೆದಿದೆ.

ಅಂಬಿಕಾನಗರದ ಜಮಗಾ ಕಾಲೋನಿಯ ಸಂತೋಷ ಚಂದ್ರುಗೌಡ ಹನುಮಕೊಪ್ಪ ಎಂಬಾತನ ಮೇಲೆ‌ ದೂರು ದಾಖಲಾಗಿದೆ.

ಈತ ಕೆಪಿಸಿ-1 ನೇ ಕಾಲೋನಿಯ ಬಸ್ ನಿಲ್ದಾಣದ ಸಾರ್ವಜನಿಕ ಕಟ್ಟೆಯ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ಎನ್ನಲಾಗಿದೆ. ಆಗ ಪೋಲಿಸರು ದಾಳಿ ನಡೆಸಿದ್ದಾರೆ. ಆದರೆ ವ್ಯಕ್ತಿ ಮದ್ಯ ಸೇವನೆ ಮಾಡಿರುವುದನ್ನು ಪರಿಕ್ಷೀಸಲು ಪೋಲಿಸರ ಬಳಿ ಬ್ರೀತ್‌ಅಲೈಜರ್ (Breathalyzer) ಉಪಕರಣ ಇರಲಿಲ್ಲ. ಆಗ ಆತ ಕುಡಿಯಲು ಬಳಸಿದ್ದ ಅಲ್ಲಿಯೇ ಇದ್ದ ಖಾಲಿ ಗ್ಲಾಸ್ ನಿಂದ ಮದ್ಯ ವಾಸನೆ ಬರುತ್ತಿತ್ತು. ಆ ವಾಸನೆಯ ಪರಿಶೀಲಿಸಿ ಪೋಲಿಸರು ಆತನ ಮೇಲೆ ಅಬಕಾರಿ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಇನ್ನು ಆತನಿಂದ 110 ರೂ ಬೆಲೆಯ ಎರಡು 90 ml ಓರಿಜಿನಲ್ ಚಾಯ್ಸ್ ವಿಸ್ಕಿ ಪಾಕೆಟ್‌, ಎರಡು ಖಾಲಿ 90ml ಓರಿಜಿನಲ್ ಚಾಯ್ಸ್ ವಿಸ್ಕಿ ಪಾಕೆಟ್, ಒಂದು‌ ಲೀಟರ್ ನ ಖಾಲಿ ನೀರಿನ ಬಾಟಲಿ ಹಾಗೂ ಪ್ಲಾಸ್ಟಿಕಿನ ಎರಡು ಖಾಲಿ ಗ್ಲಾಸ್‌ ವಶಪಡಿಸಿಕೊಂಡಿದ್ದಾರೆ.