Sirsi| ಮರಳಿಗೆ ಪರವಾನಿಗೆ ಇದೆಯಾ ಎಂದು ಕೇಳಿದ್ದಕ್ಕೆ ವ್ಯಕ್ತಿಯೊರ್ವನ ಮೇಲೆ ಬೆದರಿಕೆ ಹಾಕಿದ ಘಟನೆ ಶಿರಸಿಯ ಗೌಡಳ್ಳಿಯಲ್ಲಿ ನಡೆದಿದೆ.
ಗೌಡಳ್ಳಿಯ ಅಬ್ದುಲ್ ಬಾರಿ ತಂದೆ ಮಹಮ್ಮದ ಇಸಾಕ ಶೇಖ್ ಎಂಬುವವರೆ ಬೆದರಿಕೆ ಹಾಕಿಸಿಕೊಂಡವರು. ಇವರು ಶಿರಸಿಯ ಗ್ರಾಮೀಣ ಪೋಲಿಸ್ ಠಾಣೆಗೆ ನೀಡಿದ ದೂರಿನಂತೆ, ಗೌಡಳ್ಳಿಯ ತಮ್ಮ ಮನೆಯ ಹತ್ತಿರ ಬರುತ್ತಿರುವಾಗ ರಸ್ತೆಯ ಮೇಲೆ ಟಿಪ್ಪರ್ (ನಂ. ಕೆ.ಎ-47/9215) ನಲ್ಲಿ ಮರಳು ತುಂಬಿ ನಿಲ್ಲಿಸಲಾಗಿತ್ತು. ಆಗ ಈ ಮರಳಿಗೆ ಪರ್ಮಿಷನ್ ಇದೇಯಾ ಅಂತಾ ಕೇಳಿದಾಗ, ಆ ಟಿಪ್ಪರ್ ಚಾಲಕ ಪರಮೆಶ್ವರ ತನ್ನನ್ನ ಹೊಡೆಯಲು ಬಂದು, ನಿನ್ನ ಗಾಡಿಯ ಕೆಳಗೆ ಹಾಕಿ ಸಾಯಿಸುತ್ತೇನೆ, ನಿನಗೆ ಬಿಡುವುದಿಲ್ಲಾ ಎನ್ನುತ್ತಾ ಜೀವದ ಬೆದರಿಕೆ ಹಾಕಿದ್ದಲ್ಲದೇ ಕೆಟ್ಟ ಶಬ್ದಗಳಿಂದ ಬೈದಿರುತ್ತಾನೆ ಎಂದು ಲಿಖಿತ ದೂರು ನೀಡಿದ್ದಾರೆ.
ಅಸಂಜ್ಞೆಯ ಅಪರಾಧವಾಗಿದ್ದರಿಂದ ಅಬ್ದುಲ್ ಶೇಖ್ ಅವರ ದೂರನ್ನು 352, 351(2), ಭಾರತೀಯ ನ್ಯಾಯ &3-2023 ರ ಅಡಿ ಶಿರಸಿ ಗ್ರಾಮೀಣ ಪೋಲಿಸ್ ಠಾಣೆ ಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
