Bhatkal| ಹಿಂದೂ ಯುವತಿಯನ್ನು ಬಲವಂತಪಡಿಸಿ ಕಾರಿನಲ್ಲಿ ಕರೆದುಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.

ಪ್ರಕರಣದ ಆರೋಪಿ ಅನ್‌ಫಲ್‌ ಸುಪರ್‍ ಮಾರ್ಕೇಟ್‌ನ ಸೇಲ್ಸ್‌ ಮೆನ್‌ ಶಾಹಿದ್‌ ತಂದೆ ಸೈಫ್‌ ಖಾನ್‌ (21)ಎಂಬಾತನೇ ಬಂಧಿತ ವ್ಯಕ್ತಿ. ಈತ ಭಟ್ಕಳದ ಅದೇ ಅನ್‌ಫಲ್‌ ಸುಪರ್‌ ಮಾರ್ಕೇಟ್‌ ನಲ್ಲಿಕೆಲಸ ಮಾಡುತ್ತಿದ್ದ ಯುವತಿಯನ್ನು ಇಚ್ಛೆ ಇಲ್ಲದಿದ್ದರೂ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಅಲ್ಲದೇ ಬುಧವಾರ ಜೂ.17 ರ ಬೆಳಗ್ಗೆ 7.30 ರ ಸುಮಾರಿಗೆ ಅನಫಲ್‌ ಸುಪರ್‌ ಮಾರ್ಕೇಟ್‌ ಹಿಂದೆ ಇರುವ ಹಾಸ್ಟೇಲ್‌ ಬಳಿ ಬಂದು, ನಿನ್ನ ಬಳಿ ಮಾತನಾಡುವುದಿದೆ ಎಂದು ಹೇಳಿ ಬಲವಂತವಾಗಿ ಕಾರ್‌ (TN-01 BE 1144) ನಲ್ಲಿ ಹತ್ತಿಸಿಕೊಂಡು ಕಾರಿನ ಬಾಗಿಲು ಹಾಕಿಕೊಂಡು, ಕಾರಿನ ಸೀಟ್ ಬೆಲ್ಟ್‌ ಹಾಕಿ ವೇಗವಾಗಿ ಕರೆದುಕೊಂಡು ಹೋಗಿದ್ದ. ಈ ಬಗ್ಗೆ ಯುವತಿ ಭಟ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಭಟ್ಕಳಕ್ಕೆ ಎಸ್ಪಿ: ಎಸ್ಪಿ ದೀಪನ್‌ ಎಂ.ಎನ್‌ ಭಟ್ಕಳಕ್ಕೆ ಭೇಟಿ ನೀಡಿದ್ದು, ಘಟನೆ ಸಂಭಂಧಿಸಿಂತೆ ಪೋಲಿಸ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಟಣದಲ್ಲಿ ಪೋಲಿಸರು ಸೂಕ್ತ ಬಂದೋಬಸ್ತ್‌ ಕೈಗೊಂಡಿದ್ದಾರೆ.