Kumta| ಕುಮಟಾದ ಊರಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡುವು ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಟಿ–ಕುಟಿ ಮಂಡದ ಮೇಲೆ ಪೋಲಿಸರು ದಾಳಿ ನಡೆಸಿ, ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಹೊನ್ನಾವರದ ಮಾಡಗೇರಿಯ ಗುರುಪ್ರಸಾದ ವಾಸುದೇವ ನಾಯ್ಕ (30), ಕುಮಟಾ ತಲಗೋಡದ ಪರಮೇಶ್ವರ ಮಾದೇವ ಪಟಗಾರ (45), ಹೊನ್ನಾವರ ಕಡತೋಕದ
ಮಂಜುನಾಥ ತಂದೆ ದ್ಯಾವಾ ಮುಕ್ರಿ (40), ಹೊನ್ನಾವರದ ಸಂತೋಷ ತಂದೆ ಮಂಜುನಾಥ ಕೋಡಿಯಾ (24), ಕುಮಟಾ ಊರಕೇರಿಯ ಪ್ರದೀಪ ತಂದೆ ಕೃಷ್ಣ ಪಟಗಾರ (37), ಕುಮಟಾದ ನಾಗರಾಜ ತಂದೆ ಪರಮೇಶ್ವರ ಪಟಗಾರ (42) ಹಾಗೂ ಹೊನ್ನಾವರ ಗೇರುಸೊಪ್ಪಾದ ಉಮೇಶ ರಾಮನಾಥ ನಾಯ್ಕ (55) ಸೇರಿದಂತೆ ಒಟ್ಟು ಏಳು ಆರೋಪಿಗಳು ಕುಟ್ ಕುಟಿ ಆಟದಲ್ಲಿ ತೊಡಗಿದ್ದ ಆರೋಪಿಗಳು.

ಕುಮಟಾ ಠಾಣೆಯಲ್ಲಿ ಪೋಲಿಸ್ ನಿರೀಕ್ಷಕ ಯೊಗೇಶ ಕೆ.ಎಂ. ಪ್ರಕರಣ ದಾಖಲಿಸಿಕೊಂಡಿದ್ದಾರೆ.