ಕಾರವಾರ: ಬಿಣಗಾದ ರಾಮನಗರ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ ಸುಮಾರು 465 ಗ್ರಾಂ ಗಾಂಜಾ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಸದಾಶಿವಗಡ ತಾರಿವಾಡಾದ ನಾಗರಾಜ ಮಲ್ಲಿಕಾರ್ಜುನ ಹಡಪದ (26) ಹಾಗೂ ಬೆಂಗಳೂರು ಮೂಲದ ಹಾಲಿ ಸದಾಶಿವಗಡದ ತಾರಿವಾಡಾದ ನಿವಾಸಿ ವಿನೋದ ಕುಮಾರ ಆನಂದ (26) ಎಂದು ಗುರುತಿಸಲಾಗಿದೆ.
ಜುಲೈ 27ರಂದು ಮಧ್ಯಾಹ್ನ ಸುಮಾರು 12 ಗಂಟೆ ವೇಳೆ ಕಾರವಾರ ತಾಲೂಕಿನ ಬಿಣಗಾ–ರಾಮನಗರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸುಮಾರು ₹25 ಸಾವಿರ ಮೌಲ್ಯದ 465 ಗ್ರಾಂ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ತಮ್ಮ ವಶದಲ್ಲಿಟ್ಟುಕೊಂಡಿದ್ದರು ಎಂಬ ಆರೋಪದ ಮೇರೆಗೆ ಪೊಲೀಸರು ದಾಳಿ ನಡೆಸಿದರು.
ದಾಳಿ ವೇಳೆ ಆರೋಪಿಗಳಿಂದ 465 ಗ್ರಾಂ ಗಾಂಜಾ, ಒಂದು ರಿಯಲ್‌ಮಿ ಮೊಬೈಲ್ ಫೋನ್, ಕೆಎ-30/ಡಬ್ಲ್ಯು-2276 ಸಂಖ್ಯೆಯ ಬಜಾಜ್ ಪಲ್ಸರ್ ಮೋಟಾರ್‌ಸೈಕಲ್ ಹಾಗೂ ₹250 ನಗದು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
