ಹಳಿಯಾಳ: ಹಳಿಯಾಳದ ಜನರು ನೀರಿಲ್ಲದೇ ತಾಳ್ಮೆ ಕಳೆದುಕೊಂಡಿದ್ದಾರೆ. ಜನರಿಗೆ ಶಾಸಕ ಆರ್.ವಿ. ದೇಶ್‌ಪಾಂಡೆ ರೈತರಿಗೆ ನೀರು ಕೊಡದಿದ್ರೆ ರಕ್ತ ಕ್ರಾಂತಿಯಾಗುತ್ತದೆ, ರಕ್ತಪಾತವಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ್ ಬೊಬಾಟಿ ಎಚ್ಚರಿಕೆ ನೀಡಿದ್ದಾರೆ.

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಜಿಲ್ಲೆಯಲ್ಲಿ 100 ಮೀ. ಕೆನಾಲ್ ಮಾಡಿ ನೀರು ತಂದಿದ್ದಾರೆ. ಆದರೆ, ದಾಂಡೇಲಿ15ಕಿ.ಮೀ. ಅಂತರದಲ್ಲಿದ್ರೂ ನೀರು ನಂಬಿಕೊಂಡ ಎಲ್ಲಾ ಬೋರ್‌ವೆಲ್  ಬರಿದಾಗಿವೆ. 9 ಬಾರಿ ಶಾಸಕ ಆರ್.ವಿ.ದೇಶ್‌ಪಾಂಡೆ ಜನರ ಮತ ಪಡೆದು ಆರಿಸಿಬಂದಿದ್ದು, ಜನರಿಗೆ ನೀರು ಕೊಡಲು ಯೋಗ್ಯತೆಯಿಲ್ಲದಿದ್ರೆ, ಈ ಖುರ್ಚಿ ಮೇಲೆ ಕುಳಿತುಕೊಳ್ಳಲು ನಿಮಗೆ ಅರ್ಹತೆಯಿಲ್ಲ.

ಜನರಿಗೆ ನೀರು ಕೊಡಲಾಗಿದಿದ್ರೆ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ‌ ನೀಡಿ. ನಾವೇ ನೀರಿನ ಯೋಜನೆಗೆ ಡಿಪಿಆರ್ ಮಾಡಿಸಿ, ಮುಂದಿನ ಚುನಾವಣೆಯೊಳಗೆ ಯೋಜನೆಗೆ ಅನುಮೋದನೆ ಪಡೆದುಕೊಂಡು ಬರುತ್ತೇವೆ. ಇದು ಬೇಡದಿದ್ರೆ ನೀರು ಪೂರೈಕೆ ಮಾಡಿಸಿ, ಇಲ್ಲದಿದ್ರೆ ರಕ್ತಕ್ರಾಂತಿಯಾಗುತ್ತದೆ. ಜನರು ಜಾಗೃತರಾಗಿದ್ದು, ನಿಮ್ಮ ದ್ವಂದ್ವ ನೀತಿ, ಆಟ ಎಲ್ಲಾ ರೈತ ಮಕ್ಕಳಿಗೆ ತಿಳಿದುಬಂದಿದೆ. ರೈತರಿಗೆ ನೀರಿನ ವ್ಯವಸ್ಥೆಯಾಗದಿದ್ರೆ ಯಾವ ಮಟ್ಟದ ಹೋರಾಟಕ್ಕೂ ತಯಾರಿದ್ದೇವೆ. ಏತ ನೀರಾವರಿ ವ್ಯವಸ್ಥೆ ಆಗಲೇಬೇಕು. ಇಲ್ಲಾಂದ್ರೆ ಬಿಡಲ್ಲ, ಬೇಕಾದ ಚಳುವಳಿ‌ ಮಾಡಲು ತಯಾರಿದ್ದೇವೆ ಎಂದು ಕುಮಾರ್ ಬೊಬಾಟಿ ಗುಡುಗಿದ್ದಾರೆ.‌

ರೈತ ಮುಖಂಡ ನಾಗೇಂದ್ರ ಜಿವೊಜಿ ಹಾಗೂ ಇತರರು ಸುದ್ದಿಯೋಷ್ಠಿಯಲ್ಲಿ ಉಪಸ್ಥಿತರಿದ್ದರು.