ಕಾರವಾರ: ಠೇವಣಿದಾರರಿಗೆ ಕೋಟ್ಯಾಂತರ ರೂ. ವಂಚಿಸಿರುವ ಸದಾಶಿವಗಡದ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ಧ ಸಹಕಾರಿ ಸಂಘ ನಿಯಮಿತದ ನಿರ್ದೇಶಕರು ಹಾಗೂ ಶಾಖಾ‌ ವ್ಯವಸ್ಥಾಪಕರನ್ನು ಬಂಧಿಸಿ ತನಿಖೆ ನಡೆಸುವಂತೆ ಠೇವಣಿ ವಂಚಿತರು ಒತ್ತಾಯಿಸಿದ್ದಾರೆ.

ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ, ಗಜೇಂದ್ರ ನಾಯ್ಕ, ಸದಾಶಿವಗಡದ ಮತ್ತು ಕಾರವಾರದ ಸುಮಾರು 6 ಸಾವಿರ ಜನರಿಂದ ಸುಮಾರು ರೂ56 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ ಗ್ರಾಹಕರಿಗೆ ವಂಚಿಸಲಾಗಿದೆ.

ಪ್ರಕರಣದಲ್ಲಿ ಸೊಸೈಟಿಯ ಅಧ್ಯಕ್ಷ ಲಿಂಗರಾಜ್ ಕಲ್ಗುಟಕರ್ ಸೇರಿದಂತೆ ಒಟ್ಟು ಇಬ್ಬರನ್ನು ಮಾತ್ರ ಬಂಧಿಸಲಾಗಿದೆ. ಆದರೆ ಸಂಘದ ಸೊಸೈಟಿಯ 17 ನಿರ್ದೇಶಕರು ಹಾಗೂ 13 ಶಾಖಾ ವ್ಯವಸ್ಥಾಪಕರನ್ನು ಕೂಡಲೇ ಬಂಧಿಸಿ ತನಿಖೆ ಮಾಡಿದರೆ ಮಾತ್ರ ಹಣ ಕಳೆದುಕೊಂಡ ಠೇವಣಿದಾರರಿಗೆ ಹಣ ಮರಳಿ ದೊರೆಯಬಹುದು ಎಂದರು.

ಇನ್ನು ಠೇವಣಿ ವಂಚಿತರ ಗ್ರಾಹಕರ ವತಿಯಿಂದ ಇದೇ ಫೆ. 2  ರಂದು ಬೆಳಿಗ್ಗೆ ಬೆಂಗಳೂರಿನ ವಿಧಾನಸೌಧ ಬೆಂಗಳೂರು ಎದುರು ನೊಂದ ಗ್ರಾಹಕರಿಂದ ಧರಣಿ ಉಪವಾಸ ಸತ್ಯಾಗೃಹ ಹಮ್ಮಿಕೊಂಡು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.