Karwar| ಐಎಂಡಿಯ ಬಾರಿ ಚಂಡಮಾರುತ ಹಾಗೂ ಗಾಳಿ ಮಳೆ ಮುನ್ಸೂಚನೆ ಹಾಗೂ ಮಳೆಗಾಲದ ಆರಂಭದ ಹಿನ್ನೆಲೆಯಲ್ಲಿ ಜಿಲ್ಲೆಯ ಕಡಲತೀರ ಹಾಗೂ ನದಿತೀರಗಳಲ್ಲಿ ಪ್ರವಾಸಿಗರಿಗೆ ಬೋಟಿಂಗ್, ಜಲ ಸಾಹಸ ಕ್ರೀಡೆ ಹಾಗೂ ಹೊನ್ನಾವರದ ಅಪ್ಸರಕೊಂಡ ಬೀಚ್ ನಲ್ಲಿ ಪ್ರಿವೆಡ್ಡಿಂಗ್ ಸೆಟ್ ಅಳವಡಿಕೆಗಳನ್ನು ತಕ್ಷಣ ಜಾರಿಗೆ ಬರುವಂತೆ ಸ್ಥಗಿತಗೊಳಿಸಿ ಉತ್ತರಕನ್ನಡ ರಿವರ್ ರಾಫ್ಟಿಂಗ್ ಮತ್ತು ಜಲ ಸಾಹಸ ಕ್ರೀಡೆ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಆದೇಶಿಸಿದೆ‌.

ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮೇನ್ ಬೀಚ್, ಓಂ ಬೀಚ್, ಕೂಡ್ಲೆ ಬೀಚ್, ಹಾಫ್‌ನ ಬೀಚ್, ಪ್ಯಾರಡೈಸ್ ಬೀಚ್, ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಬೀಚ್, ಕಾರವಾರ ಬೀಚ್ ಗಳಲ್ಲಿ ಪ್ರವಾಸಿ ಬೋಟಿಂಗ್ ಹಾಗೂ ಜಲಸಾಹಸ ಕ್ರೀಡೆ ಚಟುವಟಿಕೆ, ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವೀಂಗ್ ಚಟುವಟಿಕೆ, ಕುಮಟಾ ತಾಲ್ಲೂಕಿನ ತದಡಿ ಅಘನಾಶಿನಿ ನದಿ ತೀರ, ಹೊನ್ನಾವರ ಮತ್ತು ಕಾಸರಕೋಡು ಭಾಗದ ಶರಾವತಿ ಹಿನ್ನೀರಿನಲ್ಲಿ ಪ್ರವಾಸಿ ಬೋಟಿಂಗ್ ಚಟುವಟಿಕೆ ಮತ್ತು ಅಪ್ಸರಕೊಂಡ ಬೀಚ್ ನಲ್ಲಿ ಪ್ರೀವೆಡ್ಡಿಂಗ್ ಸೆಟ್ ಅಳವಡಿಕೆ ಸ್ಥಗಿತಕ್ಕೆ ಸಮಿತಿ ಸೂಚನೆ ನೀಡಿದೆ.