ದಾಂಡೇಲಿ: ಕೊರೊನಾ ಸಾಂಕ್ರಾಮಿಕದ ದಿನಗಳಿಂದ ಸ್ಥಗಿತಗೊಂಡಿದ್ದ ದಾಂಡೇಲಿ‌ ರೈಲು ಪುನರಾರಂಭಗೊಳ್ಳುತ್ತಿದ್ದು, ಈ ರೈಲ್ವೆ ಸೇವೆಗೆ ಇದೇ ಫೆಬ್ರವರಿ 7 ರಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಚಾಲನೆ ನೀಡಲಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

​ ಕೊರೊನಾ ಸಾಂಕ್ರಾಮಿಕದ ದಿನಗಳಿಂದ ಸ್ಥಗಿತಗೊಂಡಿದ್ದ ದಾಂಡೇಲಿ ರೈಲು ಸೇವೆ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿರಂತರ ಪರಿಶ್ರಮದ ಫಲವಾಗಿ ಮತ್ತೆ ಆರಂಭಗೊಳ್ಳುತ್ತಿದೆ.

ಫೆಬ್ರವರಿ 7ನೇ ತಾರೀಕು ಶನಿವಾರ ಸಂಜೆ 4ಕ್ಕೆ ಗಂಟೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ರೈಲು ಸಂಚಾರವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.

​ದಾಂಡೇಲಿ ಭಾಗದ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಸಂಸದ ಕಾಗೇರಿ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಸತತ ಪ್ರಯತ್ನ ನಡೆಸಿ ರೈಲು ಸೇವೆಯನ್ನು ಪುನರಾರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ರೈಲಿನ ಮೂಲಕ ದಾಂಡೇಲಿ ಭಾಗದ ಜನತೆಗೆ ಹಾಗೂ ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಸಂಚಲನ ಮೂಡಲಿದೆ ಎಂದು ಸಂಸದ ಕಾಗೇರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.