Karwar| ಸ್ಥಳೀಯವಾಗಿ ಹೆಚ್ಚಿನ ಉದ್ಯಮಗಳ ಸ್ಥಾಪನೆಯ ಮೂಲಕ ಕೊಂಕಣ ಮಾರಾಠಾ ಸಮಾಜದ ಯುವಕರು ಉದ್ಯೋಗದ ಹುಡುಕಾಟದಲ್ಲಿ ಗೋವಾ ಸೇರಿದಂತೆ ಹೊರ ರಾಜ್ಯಗಳಿಗೆ ತೆರಳುವುದನ್ನು‌ ತಡೆಯಬೇಕಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಸಂತೋಷ ನಾಯ್ಕ ಹೇಳಿದರು.

ಸದಾಶಿವಗಡದ ಕೊಂಕಣ ಮರಾಠಾ ಮಂಡಳದ 27ನೇ ಯುಗಾದಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಂಡಳದ ಕಮಿಟಿ ವತಿಯಿಂದ ವಿಶೇಷವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದ ಯುವಕರು ಉದ್ಯೋಗದ ಹುಡುಕಾಟದಲ್ಲಿ ಗೋವಾ, ಮುಂಬೈ ಸೇರಿದಂತೆ ಹೊರ ರಾಜ್ಯಗಳಿಗೆ ತೆರಳುತ್ತಿದ್ದಾರೆ. ಇದನ್ನು ತಡೆಯಲು ಸಮಾಜದ ಉದ್ಯಮಿಗಳು ಮುಂದಾಗಿ ಇಲ್ಲಿಯೇ ಕೈಗಾರಿಕೆಗಳನ್ನು ಸ್ಥಾಪಿಸಿ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವತ್ತ ಗಮನ ಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾರವಾರ ಕ್ಷೇತ್ರದ ಶಾಸಕ ಸತೀಶ್ ಕೃಷ್ಣ ಸೈಲ್, ಗೋವಾ ಪೊಲೀಸ್ ವರಿಷ್ಠಾಧಿಕಾರಿ ಗುರು ದಾಸ್ ಆನಂದು ಕದಂ, ಗೋವಾ ಶಿಕ್ಷಣ ತಜ್ಞ ಹಾಗೂ ಖ್ಯಾತ ಕೊಂಕಣಿ ಬರಹಗಾರ ಡಾ. ರಾಜಯ್ ಪವಾರ್, ಮಂಡಳದ ಅಧ್ಯಕ್ಷ ಗಜಾನನ ಆನಂದು ರಾಣೆ ಸೇರಿದಂತೆ ಕೊಂಕಣ ಮರಾಠಾ ಮಂಡಳದ ಕಾರ್ಯಕಾರಿಣಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.