Karwar| ಕಾರವಾರದಲ್ಲೇ ಕುಳಿತು ದಿಲ್ಲಿ ಪಾಲಿಟಿಕ್ಸ್ ನಲ್ಲಿ ನೇರ ‘ಎಂಟ್ರಿ’ ಮಾಡಿರುವ ಮಾಜಿ ಸಚಿವ, ಜೆಡಿಎಸ್ ಧುರೀಣ ಆನಂದ ಅಸ್ನೋಟಿಕರ್ ಸಾಮರ್ಥ್ಯ ಕಂಡು ಜನ ಹೌಹಾರಿದ್ದಾರೆ.

‘ಲೋಕಲ್ ಟು ನ್ಯಾಶನಲ್’ ಅನ್ನುವಂತೆ
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ ಚಡ್ಡಾಗೆ ಜೆಡಿಎಸ್ ಸೇರ್ಪಡೆಯಾಗುವಂತೆ ಅಸ್ನೋಟಿಕರ್ ಹಿಂದಿಯಲ್ಲಿ ಅಹ್ವಾನ‌ ನೀಡಿರುವ‌ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ‌ ವೈರಲ್ ಆಗುತ್ತಿದೆ.

ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತೀವ್ರಗೊಂಡಿದೆ. ಪಕ್ಷದ ಪ್ರಮುಖ ಸಂಸದ ರಾಘವ ಚಡ್ಡಾಗೆ ರಾಜ್ಯಸಭೆಯ ಉಪನಾಯಕನ ಸ್ಥಾನದಿಂದಲೇ‌ ವಜಾ ಮಾಡಿದೆ. ಅಲ್ಲದೇ ರಾಜ್ಯಸಭೆಯಲ್ಲಿ ಮಾತಾಡಲು ಸಹ ಪಕ್ಷದಿಂದ ಸಮಯವನ್ನೇ ನಿಗಧಿ ಮಾಡದೇ ಅವಮಾನಿಸಲಾಗಿದೆ. ಬಹುತೇಕ ಆಮ್ ಆದ್ಮಿಯಿಂದ ಒಂದು ಕಾಲನ್ನು ಅವರು ಹೊರಗಿಟ್ಟಿದ್ದಾರೆನ್ನಲಾಗಿದೆ. ಯುವ, ಆಕರ್ಷಕ ಮಾತುಗಾರಿಕೆಯ ಛಡ್ಡಾ ಅವರಿಗೆ ಹಲವು ರಾಷ್ಟ್ರೀಯ ಪಕ್ಷಗಳು ರೆಡ್ ಕಾರ್ಪೆಟ್ ಸ್ವಾಗತ ನೀಡಿದೆ.

ಆದರೆ ಜೆಡಿಎಸ್ ನಾಯಕ ಅಸ್ನೋಟಿಕರ್ ಕಾರವಾರದಿಂದಲೇ ಒಂದು ವಿಡಿಯೋವನ್ನು ಹರಿ ಬಿಟ್ಟು, ಛಡ್ಡಾ ಅವರಿಗೆ ಜೆಡಿಎಸ್ ಗೆ ಸ್ವಾಗತಿಸಿದ್ದಾರೆ. ಇದಲ್ಲದೇ ಪಕ್ಷದ ವರಿಷ್ಠರಾದ ಕುಮಾರಸ್ವಾಮಿ, ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ಮಾಡುವಂತೆ ವಿನಂತಿಸಿದ್ದಾರೆ. ಒಂದೊಮ್ಮೆ ಜೆಡಿಎಸ್ ಬರಲು ಇಷ್ಟ ಇಲ್ಲದಿದ್ದರೆ ಪ್ರಧಾನಿ ಮೋದಿ ಭೇಟಿಯಾಗಿ ಬಿಜೆಪಿ‌ ಬೇಕಿದ್ದರೆ ಸೇರ್ಪಡೆಯಾಗುವಂತೆ ಕಾಂಬೋ ಆಫರ್ (Combo Offer) ಸಹ ಛಡ್ಡಾಗೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಸದ್ಯ ಕಾರವಾರದ Talk of the Town ಆಗಿದೆ. ಅಸ್ನೋಟಿಕರ್ ಅಭಿಮಾನಿಗಳಂತು, ತಮ್ಮ ನಾಯಕ ಹೈ ಲೆವಲ್ ಕಾಂಟ್ಯಾಕ್ಟ್, ಹೈ ಲೆವಲ್ ಪಾಲಿಟಿಕ್ಸ್ ಮಾಡ್ತಿದ್ದಾರೆ. ಕಾರವಾರದಲ್ಲೇ ಕುಳಿತು ದಿಲ್ಲಿ ರಾಜಕಾರಣಕ್ಕೆ ಕೈ ಹಾಕಿದ್ದಾರೆ ಎಂದು ಬೀಗುತ್ತಿದ್ದಾರೆ. ಹಿಂದಿ, ಇಂಗ್ಲಿಷ್, ಕನ್ನಡ, ಮರಾಠಿ ಹಾಗೂ ಕೊಂಕಣಿ ಸೇರಿದಂತೆ ಪಂಚ ಭಾಷೆಗಳಲ್ಲೂ ಮಾತನಾಡುವ ಕಾರವಾರದ ಏಕೈಕ ಎಜ್ಯುಕೆಟೆಡ್ ರಾಜಕಾರಣಿ ಎಂದು‌ ಬಿಗುತ್ತಿದ್ದಾರೆ‌. 

ಇನ್ನು ಆನಂದ ವಿರೋದಿಗಳಂತೂ, ಆನಂದಗೆ ಜೆಡಿಎಸ್ ನಲ್ಲೇ ಗಟ್ಟಿ ನೆಲೆ ಇಲ್ಲ. ಇನ್ನು ಛಡ್ಡಾಗೆ‌ ಜೆಡಿಎಸ್ ಕರೆಸಿ ತಾನು ‘ಚಡ್ಡಿ’ ಹಾಕಿಕೊಂಡು ಬಿಜೆಪಿ‌ ಬರಲು ಹೊರಟಿದ್ದಾರೆ ಎಂದು ವ್ಯಂಗ ಮಾಡಿದ್ದಾರೆ.

ಒಟ್ಟಾರೆ ಆಮ್ ಆದ್ಮಿ‌ ಎಂಪಿ ರಾಘವ ಛಡ್ಡಾ ಅಸ್ನೋಟಿಕರ್ ಅವರ ವಿಡಿಯೋ‌ ನೋಡಿ ಜೆಡಿಎಸ್ ಸೇರಲೋ ಅಥವಾ‌ ಬಿಜೆಪಿ ಸೇರಲೋ ಎಂಬ ಕನ್ಪೂಸ್ ನಲ್ಲಿದ್ದಾರೆ ಎಂಬುದು ಮಾತ್ರ ಶುದ್ಧ ಸುಳ್ಳಂತೆ!