Ankola| ಪ್ರವಾಸಿಗನೊಬ್ಬ ಮುಳುಗಿ ಸಾವನ್ನಪ್ಪಿದ ಘಟನೆ ಅಂಕೋಲಾದ ಅಚವೆ ಬಳಿಯ ವಿಭೂತಿ ಫಾಲ್ಸ್ ನಲ್ಲಿ ನಡೆದಿದೆ.
ಮೃತಪಟ್ಟವನನ್ನು ತೆಲಗಾಂಣದ ಮೂಲದ ಅಜೇಯ್ ಶಿಲಾಮ್ (26) ಎಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಈತ ಈಜುವ ವೇಳೆ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಮೃತಪಟ್ಟ ವ್ಯಕ್ತಿಯ ಶವ ಮೇಲಕ್ಕೆತ್ತಿದ್ದಾರೆ. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
