ಹಳಿಯಾಳ-ದಾಂಡೇಲಿ ರಸ್ತೆಯಲ್ಲಿ ಬೈಕ್ ಅಪಘಾತಕವಾಗಿದ್ದು 17 ವರ್ಷದ ವಿದ್ಯಾರ್ಥಿಮೃತಪಟ್ಟಿದ್ದಾನೆ. ಹಳಿಯಾಳದ ಕಾನ್ವಿಂಟ್ ರಸ್ತೆಯ ಮೆರಿಯಾನ್ ಎಂ ಲೂಯಿಸ್ ಅವರು ತಮ್ಮ ಪುತ್ರ ಜಾನ್ವಿಯಾನಿ ಜೇಮ್ಸ ಡಿಸೋಜಾ ಮೃತ ಯುವಕ ಎಂದು ತಿಳಿದು ಬಂದಿದೆ.
ಜಾನ್ವಿಯಾನಿ ಜೇಮ್ಸ ಡಿಸೋಜಾ ಅವರ ಬಳಿ ವಾಹನ ಪರವಾನಿಗೆ ಇಲ್ಲದಿದ್ದರೂ ಅವರಿಗೆ ಬೈಕ್ ಓಡಿಸಿದ್ದಲ್ಲದೇ ಹೆಲ್ಮೇಟ್ ಕೂಡಾ ಧರಿಸಿರಲಿಲ್ಲ. ಸಂಚಾರಿ ನಿಯಮ ಪಾಲಿಸದೇ ಅತಿಯಾದ ವೇಗದಿಂದ ಬೈಕ್ ಓಡಿಸಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಕಬ್ಬಿನ ಗದ್ದೆಗೆ ಹೋಗಿ ಬಿದ್ದಿದೆ.
ಮದ್ಯರಾತ್ರಿ ಈ ಘಟನೆ ನಡೆದ ಪರಿಣಾಮ ಅಪಘಾತದ ಮಾಹಿತಿ ಯಾರಿಗೂ ಸಿಗಲಿಲ್ಲ. ರವಿವರ ಮುಂಜಾನೆ ಈ ದುರ್ಘಟನೆ ಬೆಳಕಿಗೆ ಬಂದಿದ್ದು, ಅಪಘಾತವಾದ ಬಳಿಕ ಭಾರೀ ರಕ್ತಸ್ರಾವದಿಂದ ಬಳಲಿ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
