Celebration to commemorate the declaration of independence by lowering the British flag|Karwar| ಕಡವಾಡ ಗ್ರಾಮದ ನಂದವಾಳದಲ್ಲಿ ಫೆಬ್ರವರಿ 26 ರಂದು ಮೊಟ್ಟ ಮೊದಲ ಬಾರಿಗೆ ಬ್ರಿಟೀಷ್ ಧ್ವಜವನ್ನು ಕೆಳಕ್ಕಿಳಿಸಿ ಸ್ವಾತಂತ್ರ್ಯದ ಕಹಳೆ ಬಾರಿಸಿದ ಸೋಂದಾ ಅರಸ ರಾಜಾ ಸದಾಶಿವರಾಯರ ಸ್ವಾತಂತ್ರ್ಯ ಹೋರಾಟದ ಸವಿನೆನಪಿಗಾಗಿ ವಿಜಯ ದಿವಸ ಆಚರಣೆ ನಡೆಯಲಿದೆ.
ಫೆ.26ರಂದು ಬೆಳಿಗ್ಗೆ 11.00 ಗಂಟೆಗೆ ನಂದವಾಳದ ರಘು ಗಣೇಶ ನಾಯ್ಕ ಕಂಪೌಂಡ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. 11 ಗಂಟೆಗೆ ಭಗವಾಧ್ವಜ ಆರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ಕಾರವಾರದ ನಿವೃತ್ತ ಭೌತಶಾಸ್ತ್ರ ಉಪನ್ಯಾಸಕ ಎಸ್. ವಿ. ನಾಯಕ ಅವರು ರಾಜಾ ಸದಾಶಿವರಾಯರ ಕುರಿತು ಉಪನ್ಯಾಸ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿಜಯ ದಿವಸ ಆಚರಣೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
