ಗೋಕರ್ಣ : ದೋಣಿ ಕಟ್ಟುವ ವಿಚಾರವಾಗಿ ಇಬ್ಬರು ಯುವಕರ ನಡುವೆ ವಾಗ್ವಾದ ನಡೆದು ಕೊನೆಗೆ ಕತ್ತಿಯಿಂದ ಹಲ್ಲೆ ನಡಿಸಿದ ಘಟನೆ ಗೋಕರ್ಣ ಪೊಲೀಸಾ ಠಾಣಾ ವ್ಯಾಪ್ತಿಯ ಮೂಡಂಗಿಯಲ್ಲಿ ನಡೆದಿದೆ.

ಮೂಡಂಗಿಯ ರವೀಂದ್ರ ಜೋಗಿ ಎಂಬಾತನಿಗೆ ಸಾಣಿಕಟ್ಟಾದ ಅರವಿಂದ ತಿಮ್ಮಪ್ಪ ನಾಯ್ಕ ಎಂಬಾತ ದೋಣಿ ಕಟ್ಟುವ ವಿಚಾರವಾಗಿ ಜಗಳಮಾಡಿ ಕೊನೆಗೆ ಕತ್ತಿಯಿಂದ ಹಲ್ಲೆಮಾಡಿದ್ದಾನೆ‌. ರವೀಂದ್ರ ಜೋಗಿ ಎಂಬಾತ ಮೂಡಂಗಿಯ ಖಾರ್ಲೆಂಡ್ ಹತ್ತಿರ ತನ್ನ ದೋಣಿಯನ್ನು ಕಟ್ಟಿದ್ದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ.

ಅಘನಾಶಿನಿ ನದಿಗೆ ಹೊಂದಿಕೊಂಡಿರುವ ಖಾರ್ಲೆಂಡಿನಲ್ಲಿ ರವೀಂದ್ರ ಜೋಗಿ ತನ್ನ ಮೀನುಗಾರಿಕಾ ದೋಣಿಯನ್ನು ಕಟ್ಟಿದ್ದಾನೆ. ಇದಕ್ಕೆ ಅರವಿಂದ ತಿಮ್ಮಪ್ಪ ನಾಯ್ಕ ತಗಾದೆ ತೆಗೆದು ಈ ಸ್ಥಳದಲ್ಲಿ ದೋಣಿ ಕಟ್ಟಲು ವಿರೋಧಿಸಿದ್ದಾನೆ. ಬಳಿಕ ಏಕಾ ಏಕಿ ಕತ್ತಿತಿಂದ ದೋಣಿ ಕಡಿದು ಹಲ್ಲೆ ಮಾಡಿದ್ದಾನೆ. ಇನ್ನು ಪ್ರಶ್ನಿಸಿದ ರವೀಂದ್ರ ಜೋಗಿಗೆ ಇದು ನನ್ನ ಅಪ್ಪನ ಜಾಗ ನೀನು ಇಲ್ಲಿ ದೋಣಿ ಕಟ್ಟಕೂಡದು ಎಂದು ಎಂದು ಜಗಳವಾಡಿದ್ದಾನೆ.

ಆಗ ರವೀಂದ್ರ ಜೋಗಿ ಇದು ಸರ್ಕಾರಿ ಜಾಗ. ಯಾರು ಬೇಕಾದರೂ ದೋಣಿ ಕಟ್ಟಬಹುದು ಎಂದು ವಾದಕ್ಕೆ ಇಳಿದಾಗ ಜಗಳ ವಿಕೋಪಕ್ಕೆ ಹೋಗಿ ಅರವಿಂದ ತಿಮ್ಮಪ್ಪ ನಾಯ್ಕ ಕತ್ತಿಯಿಂದ ರವೀಂದ್ರ ಜೋಗಿ ಮೇಲೆ ಹಲ್ಲೆ ಮಾಡಿದ್ದಾನೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.