Gokarn | ಬಾರಿ ಮಳೆ ಸಂದರ್ಭದಲ್ಲಿ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಯಲ್ಲಿ ನೀರು ತುಂಬುವುದರಿಂದ, ಆ ಸಮಯದಲ್ಲಿ ಪೂಜಾ ಸೇವೆಗಳಲ್ಲಿ ಮಹಾಬಲೇಶ್ವರ ದೇವಾಲಯದ ಆಡಳಿತ ಮಂಡಳಿ ಕೆಲ ಬದಲಾವಣೆ ಸೂಚಿಸಿದೆ.
ಮಳೆಯ ಪ್ರಮಾಣ ತೀವ್ರವಾಗಿ ಹೆಚ್ಚಾಗಿ ಗರ್ಭಗುಡಿಯಲ್ಲಿ ನೀರು ತುಂಬುವ ತುರ್ತು ಪರಿಸ್ಥಿತಿ ಎದುರಾದರೆ, ದೇವರ ಸ್ಪರ್ಶ ದರ್ಶನ ಹಾಗೂ ಅರ್ಚಕರ ದ್ವಾರದ ಮೂಲಕ ನಡೆಯುವ ಪೂಜಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ಇದೇ ವೇಳೆ ಭಕ್ತರಿಗೆ ನಂದಿ ಮಂಟಪದಿಂದ ಮಹಾಬಲೇಶ್ವರನ ದರ್ಶನ ಪಡೆಯಲು ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.
ದೇವಾಲಯದ ವ್ಯವಸ್ಥೆ ಸುಗಮವಾಗಿ ನಡೆಯಲು ಭಕ್ತಾದಿಗಳು ಹಾಗೂ ಅರ್ಚಕರು ಸಹಕರಿಸಬೇಕು ಎಂದು ಮಹಾಬಲೇಶ್ವರ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.
