Bhatkal | ತಾಲೂಕಿನ ಹಾಡುವಳ್ಳಿ ಗ್ರಾಮದ ಕುಳವಾಡಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸಿ ಹಣ ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿ 6 ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳಕೆಯ ಮಂಜುನಾಥ ಹೊನ್ನಪ್ಪ ನಾಯ್ಕ, ಮುಂಡಳ್ಳಿಯ ಶ್ರೀಕಾಂತ ಮಾದೇವ ನಾಯ್ಕ, ಕಂಚಿಕೇರಿಯ ದುರ್ಗಪ್ಪ ಹೊನ್ನಪ್ಪ ನಾಯ್ಕ, ಕಲ್ಲಬ್ಬೆ ಮಾರುಕೇರಿಯ ಅನಂತ ನಾಗಪ್ಪ ಬಾಂದಿ, ಮುಟ್ಟಳ್ಳಿಯ ಮಾಸ್ತಪ್ಪ ಮಂಜಪ್ಪ ನಾಯ್ಕ, ಜಾಲಿ ಹಾರನಗದ್ದೆಯ ಮಂಜುನಾಥ ಶನಿಯಾರ ನಾಯ್ಕ ಎಂದು ಗುರುತಿಸಲಾಗಿದೆ. ಇನ್ನುಳಿದಂತೆ ಯಲ್ವಡಿಕಾವೂರಿನ ಲಕ್ಷ್ಮಣ ಬಡಿಯಾ ನಾಯ್ಕ ಸೇರಿದಂತೆ ಹಲವರು ಓಡಿ ನಾಪತ್ತೆಯಾಗಿದ್ದಾರೆ.

ಪ್ರಕರಣ ವಿವರ: ರವಿವಾರ ಜೂ.7ರ ಸಂಜೆ ಸುಮಾರು 5.15 ಗಂಟೆಗೆ ಆರೋಪಿಗಳು ಹುಂಜಗಳ ಕಾಲುಗಳಿಗೆ ಕತ್ತಿ ಕಟ್ಟಿ ಕಾದಾಟಕ್ಕೆ ಬಿಟ್ಟು, ಅದರ ಮೇಲೆ ಹಣ ಪಣಕ್ಕಿಟ್ಟು ಜೂಜಾಟದಲ್ಲಿ ತೊಡಗಿದ್ದರು ಎನ್ನಲಾಗಿದೆ. ಈ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಸ್ಥಳದಲ್ಲಿದ್ದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.

ಪ್ರಕರಣ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.