ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್.ಸಿ.ಬಿ ಜಯಗಳಿಸುವ ಮೂಲಕ WPL ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆರ್.ಸಿ. ನಾಯಕಿ ಸೃತಿ ಮಂದಾನ 87 (40 ಬಾಲಿಗೆ) ಜಾರ್ಜೊ ವಾಲ್ 79 (54 ಬಾಲಿಗೆ) ರನ್ನ ಗಳಿಸಿ ತಂಡಕ್ಕೆ ಬಲ ನೀಡಿದರು. ಈ ಮೂಲಕ ಆರ್.ಸಿ.ಬಿ ಎರಡನೇ ಬಾರಿ WPL ಚಾಂಪಿಯನ್ಸ್ ಆದಂತಾಗಿದೆ.
ವಡೋದರಾದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2026ರ (WPL) ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 203 ರನ್ ಕಲೆಹಾಕಿತ್ತು. ಆ ಮೂಲಕ ಫೈನಲ್ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 204 ರನ್ ಟಾರ್ಗೆಟ್ ನೀಡಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕಿ ಜೆಮಿಮಾ ರಾಡ್ರಿಗಸ್ 57 ರನ್ ಹಾಗೂ ಲಾರಾ ವೊಲ್ವಾರ್ಡ್ಟ್ 44 ರನ್ ಹಾಗೂ ಚಿನೆಲ್ಲೆ ಹೆನ್ರಿ ಸ್ಫೋಟಕ 35 ರನ್‌ಗಳ ನೆರವಿನಿಂದ ಡೆಲ್ಲಿ ತಂಡ 202ಕ್ಕೂ ಅಧಿಕ ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸಯಾಲಿ ಸತ್ಘರೆ, ನಡಿನ್ ಡಿ ಕ್ಲರ್ಕ್ ಹಾಗೂ ಅರುಂಧತಿ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
ಡೆಲ್ಲಿ ನೀಡಿದ್ದ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ GM Harris ಔಟ್ ಆಗುವ ಆರಂಭಿಕ ಆಘಾತವಾಗಿತ್ತು. ಬಳಿಕ ನಾಯಕಿ ಸೃತಿ ಮಂದಾನ ಹಾಗೂ G Voll 150 ರನ್ ಗಳ ಜೊತೆಯಾಟ ದ ಪರಿಣಾಮ ತಂಡ ಗೆಲುವಿನ ದಡಕ್ಕೆ ತಲುಪಿತು. 203 ರನ್ನ್ ಗಳ ಗುರಿಯನ್ನು ಬೆನ್ನಟಿ ಜಯಗಳಿಸಿರುವಿದು WPL ಇತಿಹಾಸದಲ್ಲಿ ಇದೇ ಮೊದಲಾಗಿದೆ.
